Bagalkot Rain: ಭಾರೀ ಮಳೆಗೆ ನಲುಗಿದ ಐಹೊಳೆ; ಪ್ರಮುಖ ದೇವಾಲಯಗಳು ಜಲಾವೃತ
ಬಾಗಲಕೋಟೆಯಲ್ಲಿ ಮಳೆಯ ರುದ್ರ ನರ್ತನ ಮುಂದುವರೆದಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಇನ್ನು ಇಲ್ಲಿನ ವಿಶ್ವಪ್ರಸಿದ್ಧ ಐತಿಹಾಸಿಕ ಸ್ಮಾರಕಗಳಾದ ಐಹೊಳೆ ಅನೇಕ ದೇವಾಸ್ಥಾನಗಳು ಜಲಾವೃತಗೊಂಡಿವೆ. ಮಳೆಗೆ ರೈತರ ಬೆಳೆಗಳು ನಾಶವಾಗಿದ್ದು, ಜನರು ಕಂಗಾಲಾಗಿದ್ದಾರೆ.
News18 Kannada | October 14, 2020, 5:25 PM IST
1/ 8
ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ 10 ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
2/ 8
ಬಾಗಲಕೋಟೆಯಲ್ಲಿ ಈ ಬಾರಿ ಮಿತಿ ಮೀರಿದ ಮಳೆಯಾಗಿದ್ದು, ವರುಣನ ಅಬ್ಬರಕ್ಕೆ ಜನರು ರೋಸಿಹೋಗಿದ್ದಾರೆ.
3/ 8
ಕಳೆದ ಮೂರುನಾಲ್ಕುದಿಗಳಿಂದ ಸುರಿಯುತ್ತಿರುವ ಮಳೆಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಮಳೆ ಅವರ ಬದುಕು ಕಸಿದುಕೊಳ್ಳುವ ಭೀತಿ ಎದುರಾಗಿದೆ.
4/ 8
ಕಳೆದ ವರ್ಷ ಕೂಡ ಸಾಕಷ್ಟು ಹಾನಿ ಸೃಷ್ಟಿಸಿದ್ದ ಮಳೆ ಈ ಬಾರಿ ಕೂಡ ರೌದ್ರನರ್ತನ ತೋರಿದೆ.
5/ 8
ಇಲ್ಲಿನ ಪ್ರಮುಖ ದೇವಾಲಯಗಳಾದ ಮಾರುತೇಶ್ವರ, ಕೊರವರ್, ಹುಚ್ಚಪ್ಪಯ್ಯ, ಗಳಗನಾಥ ದೇವಾಲಯಕ್ಕೆ ನೀರು ನುಗ್ಗಿದೆ.
6/ 8
ಸತತ ಮಳೆಯಿಂದಾಗಿ ಮನೆಗಳು ಶಿಥಿಲಗೊಂಡು ಗೋಡೆ ಕುಸಿಯಲಾರಂಭಿಸಿದೆ.
7/ 8
ರೈತರ ಜಮೀನಿಗೆ ನೀರು ನುಗ್ಗಿದ್ದು, ಸಾಕಷ್ಟು ಬೆಳೆ ಹಾನಿವರದಿಯಾಗಿದೆ.
8/ 8
ಹವಾಮಾನ ಇಲಾಖೆ ಪ್ರಕಾರ ಮುಂದಿನ ಎರಡು ದಿನ ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದೆ