ನಗರದ ಹೃದಯ ಭಾಗ ಕಾರ್ಪೋರೇಶನ್ ಹತ್ತಿರದ ರಸ್ತೆಗಳಲ್ಲಿ ಧರೆಗೆ ಉರುಳಿದ ಮರದ ರೆಂಬೆ ಕೊಂಬೆ ನೆಲಕ್ಕುರುಳಿದ್ದು, ಬಸ್ ಮೇಲೆ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದ ಪರಿಣಾಮ ಬಸ್ ಜಖಂ ಗೊಂಡಿತ್ತು. ಇತ್ತ ಕಾರ್ಪೋರೇಶನ್ ಬಳಿ ರಸ್ತೆ ಬದಿ ನಿಂತಿದ್ದ ಆಟೋ ಮೇಲೆ ಮರದ ಕೊಂಬೆ ಉರುಳಿ ಬಿದ್ದು, ಆಟೋ ಟಾಪ್ ಸಂಪೂರ್ಣ ಹಾನಿಯಾಗಿದೆ. ಆಟೋ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.