heavy-rain-in-karwar-distict-in-sirsi
ರಾಜ್ಯದೇಶ-ವಿದೇಶಸಿನಿಮಾಕ್ರೀಡೆಲೈಫ್ ಸ್ಟೈಲ್ಫೋಟೋLive TVCoronaಟೆಕ್Budget 2021ಟ್ರೆಂಡ್ ರಾಜ್ಯದೇಶ-ವಿದೇಶಸಿನಿಮಾಕ್ರೀಡೆಲೈಫ್ ಸ್ಟೈಲ್ಫೋಟೋLive TVCoronaಟೆಕ್Budget 2021ಟ್ರೆಂಡ್ ಹೋಮ್ » ಫೋಟೋ » ದೇಶ-ವಿದೇಶ 26/11 Mumbai Attacks: ಮುಂಬೈ ದಾಳಿ ನಡೆದು ಇಂದಿಗೆ 11 ವರ್ಷ; ಕರಾಳ ದಿನವನ್ನು ನೆನಪಿಸುತ್ತೆ ಈ ಚಿತ್ರಗಳು Mumbai Terror Attack; ಲಷ್ಕರ್-ಎ-ತೊಯ್ಬಾ ಸಂಘಟೆನೆಯ ಸುಮಾರು 12 ಜನ ಉಗ್ರರು ತಂತ್ರಗಾರಿಕೆಯಿಂದ ಪಾಕಿಸ್ತಾನದಿಂದ ಭಾರತದ ಒಳ ನುಸುಳಿ ಮಹಾ ನಗರವಾದ ಮುಂಬೈಯನ್ನು ಗುರಿಯಾಗಿಸಿ ಬಾಂಬು ಮತ್ತು ಗುಂಡಿನ ಮಳೆಗೆರೆದಿದ್ದರು. News18 Kannada | November 26, 2019, 12:47 PM IST 1/ 9 ಅಂದು ನವೆಂಬರ್ 26, 2008. ದೇಶ ಕಂಡ ಕರಾಳ ದಿನ. ಮುಂಬೈ ಮಹಾ ನಗರದ ಮೇಲೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಪಾಪಿ ಉಗ್ರರು ಕೃತ್ಯಕ್ಕೆ ಮುಂಬೈ166 ಜನರು ಹತರಾದರೆ 300 ಮಂದಿ ಗಾಯಗೊಂಡಿದ್ದರು. ಆ ಕಹಿ ಘಟನೆ ನಡೆದು ಇಂದಿಗೆ 11 ವರ್ಷವಾಗಿದೆ. 2/ 9 ಲಷ್ಕರ್-ಎ-ತೊಯ್ಬಾ ಸಂಘಟನೆಯ ಸುಮಾರು 12 ಜನ ಉಗ್ರರು ತಂತ್ರಗಾರಿಕೆಯಿಂದ ಪಾಕಿಸ್ತಾನದಿಂದ ಭಾರತದ ಒಳ ನುಸುಳಿ ಮಹಾ ನಗರವಾದ ಮುಂಬೈಯನ್ನು ಗುರಿಯಾಗಿಸಿ ಬಾಂಬು ಮತ್ತು ಗುಂಡಿನ ಮಳೆಗೆರೆದಿದ್ದರು. 3/ 9 ಉಗ್ರರು 2008ರ ನವೆಂಬರ್ 26 ರಿಂದ 29ರ ವರೆಗೆ ಮೂರು ದಿನಗಳ ಕಾಲ ದಾಳಿ ನಡೆಸಿದರು. ಅಷ್ಟರಲ್ಲಿ ದೇಶದ ಸೇನಾ ಪಡೆಯೂ ಮುಂಬಯಿಗೆ ಧಾವಿಸಿ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಮೊದಲಾಯಿತು. 4/ 9 ಉಗ್ರರು ನಡೆಸಿದ ಈ ಆತ್ಮಾಹುತಿ ದಾಳಿಯಿಂದಾಗಿ ಸರ್ಕಾರಿ ಅಧಿಕಾರಿಗಳೂ, ಸೈನಿಕರು,ಸಾಮಾನ್ಯರು ಸೇರಿದಂತೆ ಅನೇಕರು ಪ್ರಾಣ ತೆತ್ತೆರು. ಹಲವರಿಗೆ ಗಾಯಗಳಾಗಿ ಆಸ್ಪತ್ರೆ ಸೇರಿದರು. 5/ 9 ಮುಂಬಯಿ ನಗರ ಹೃದಯ ಭಾಗವಾಗಿರುವ ಛತ್ರಪತಿ ಶಿವಾಜಿ ಟರ್ಮಿನಸ್, ಗಣ್ಯರು ಹಾಗು ವಿದೇಶಿಗಳು ಹೆಚ್ಚಾಗಿ ಇರುವಂತಹ ಒಬೆರಾಯ್ ಟ್ರೈಡೆಂಟ್, ತಾಜ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ಕಾಮಾ ಹಾಸ್ಪಿಟಲ್, ನಾರಿಮನ್ ಹೌಸ್, ಮೆಟ್ರೋ ಸಿನೆಮಾ, ಸೆಂಟ್ ಕ್ಸೇವಿಯರ್ ಕಾಲೇಜು ದಾಳಿಗೆ ಸಾಕ್ಷಿಯಾದ ಸ್ಥಳಗಳು. 6/ 9 ಮೇಜ್ ಗಾವ್ ನಲ್ಲಿ ಒಂದು ಬಾಂಬನ್ನು ಸ್ಪೋಟಿಸಲಾಯಿತು. 28 ರಂದು ದಾಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತ ಮುಂಬಯಿ ಪೋಲಿಸರು ಹಾಗೂ ಸ್ಥಳದಲ್ಲಿ ಲಭ್ಯವಿದ್ದ ಸೇನಾ ಪಡೆ ತಾಜ್ ಹೋಟೆಲ್ ಒಂದನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. 7/ 9 ಆದರೆ ತಾಜ್ ಹೋಟೆಲ್ ಒಳಗೆ ಅವಿತುಕೊಂಡು ಉಗ್ರರನ್ನು ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ದೇಶದ ಇತರ ಸ್ಥಳಗಳಿಂದ ಮುಂಬಯಿಗೆ ರಾಷ್ಟ್ರೀಯ ಭದ್ರತಾಪಡೆಗಳನ್ನ ರವಾನಿಸಲಾಯಿತು. 8/ 9 ನವೆಂಬರ್ 29ರ ದಿನದಂದು ಎಲ್ಲ ದಾಳಿಕೋರರನ್ನು ಕೊಂದು ಒಬ್ಬನನ್ನು ಸೆರೆ ಹಿಡಿಯುವಲ್ಲಿ ಭದ್ರತಾ ಪಡೆ ಸಫಲವಾಯಿತು. ಆತನೇ ಅಜ್ಮಲ್ ಕಸಾಬ್. 9/ 9 ಮುಂಬೈ ದಾಳಿಯಲ್ಲಿ ಸೆರೆಸಿಕ್ಕ ಉಗ್ರ ಅಜ್ಮಲ್ ಕಸಾಬ್. ತಾಜಾ ಸುದ್ದಿಬಸ್ ಟಿಕೆಟ್ ಬುಕಿಂಗ್ಗಾಗಿ ಅಭಿಬಸ್ ಜೊತೆ ಐಆರ್ಸಿಟಿಸಿ ಒಪ್ಪಂದಸ್ವಂತ ಮನೆಯಲ್ಲೇ ಕಳ್ಳತನ: ತಾಯಿ, ಮಗಳು ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು!Fire Accident: ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 6 ಜನ ಸಾವು, 19 ಜನರಿಗೆ ಗಾಯಗುಬ್ಬಚ್ಚಿ ಗೂಡಿನ ರಕ್ಷಣೆಗಾಗಿ ಬೆಳೆ ಕಟಾವು ಮಾಡದ ರೈತ; ಆನಂದ್ ಮಹೀಂದ್ರಾ ಮೆಚ್ಚುಗೆ Top Stories ಇಂಧನ ಬೆಲೆ ಏರಿಕೆ ಬಿಸಿ: ಇಂದು ದೇಶಾದ್ಯಂತ ಲಾರಿ ಮುಷ್ಕರ; ರಾಜ್ಯದಲ್ಲೂ ಬೆಂಬಲ ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 6 ಜನ ಸಾವು, 19 ಜನರಿಗೆ ಗಾಯ ಬಸ್ ಟಿಕೆಟ್ ಬುಕಿಂಗ್ಗಾಗಿ ಅಭಿಬಸ್ ಜೊತೆ ಐಆರ್ಸಿಟಿಸಿ ಒಪ್ಪಂದ ಸ್ವಂತ ಮನೆಯಲ್ಲೇ ಕಳ್ಳತನ: ತಾಯಿ, ಮಗಳು ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು! ಬಿಗ್ ಬಾಸ್ ಅಂಗಳದಲ್ಲಿ ಮತ್ತೆ ಕೇಳಿ ಬಂತು ಹುಚ್ಚ ವೆಂಕಟ್ ಹೆಸರು: ಸುದೀಪ್ ಹೇಳಿದ್ದು ಹೀಗೆ..!