ಈ ಬಾರಿಯೂ ಭಾರೀ ಮಳೆಯ ಜೊತೆಗೆ ಬಿರುಗಾಳಿ ಆರ್ಭಟಕ್ಕೆ ಕಾಫಿ ಫಸಲು ಮಣ್ಣುಪಾಲಾಗಿದೆ. ಕಾಫಿ ಫಸಲಿನ ಜೊತೆಗೆ ಕಾಫಿ ಗಿಡಗಳು ಕೂಡ ತೀವ್ರ ಶೀತದಿಂದ ಸಾಯುತ್ತಿದ್ದು ಭವಿಷ್ಯದ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದಾರೆ. ಡಿಸೆಂಬರ್-ಜನವರಿಯಲ್ಲಿ ಹಣ್ಣು ಆಗಬೇಕಿದ್ದ ಕಾಫಿ, ಈಗಾಗಲೇ ಕೆಂಪು ಬಣ್ಣಕೆ ತಿರುಗಿ ಹಣ್ಣಾಗಿದೆ. ಅಷ್ಟೇ ಅಲ್ಲದೇ ಮಳೆಯ ಹೊಡೆತಕ್ಕೆ ಕಾಫಿ ಉದುರಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.