ಬೆಂಗಳೂರಿನಲ್ಲಿ ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ತ: ಇಲ್ಲಿವೆ ಫೋಟೋಗಳು
ಕಳೆದ ಎರಡು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಬೆಂಗಳೂರಿಗರಿಗೆ ಮತ್ತೆ ಮಳೆಗಾಲದ ಅನುಭವವಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದ ರಸ್ತೆಯ ತುಂಬ ಹರಿಯುತ್ತಿದ್ದ ನೀರಿನಿಂದ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿತ್ತು. ಇನ್ನೊಂದೆಡೆ ತಗ್ಗು ಪ್ರದೇಶದ ಮನೆ, ಅಪಾರ್ಟ್ಮೆಂಟ್ಗಳಿಗೆ ನುಗ್ಗಿದ ನೀರು ನಿನ್ನೆಯ ರಾತ್ರಿಯನ್ನು ಕರಾಳವಾಗಿಸಿತ್ತು. ನಿನ್ನೆ ಸುರಿದ ಮಳೆಗೆ ಬೆಂಗಳೂರಿನ ಪರಿಸ್ಥಿತಿ ಹೇಗಿತ್ತು ಎಂಬುವುದನ್ನು ತಿಳಿಸಿಕೊಡುತ್ತವೆ ಈ ಚಿತ್ರಗಳು.