Karnataka Rains Alert: ರಾಜ್ಯದ ಜನರೇ ಗಮನಿಸಿ, ಏಪ್ರಿಲ್ 21ರಿಂದ ಮೂರು ದಿನ ಗುಡುಗು-ಮಿಂಚು ಸಹಿತ ಜೋರು ಮಳೆ

Karnataka Summer Rain: ಬೆಳಗ್ಗೆ 9 ಗಂಟೆ ಆಗುತ್ತಿದ್ದಂತೆ ಸೂರ್ಯದೇವ ತನ್ನ ಪ್ರಖರತೆಯನ್ನ ತೋರಿಸಲು ಆರಂಭಿಸುತ್ತಿದ್ದಾನೆ. ಸಂಜೆ ಆರು ಗಂಟೆಯ ನಂತರ ತಣ್ಣನೆಯ ವಾತಾವರಣಕ್ಕಾಗಿ ಜನ ಕಾಯುವಂತಾಗಿದೆ.

First published:

  • 18

    Karnataka Rains Alert: ರಾಜ್ಯದ ಜನರೇ ಗಮನಿಸಿ, ಏಪ್ರಿಲ್ 21ರಿಂದ ಮೂರು ದಿನ ಗುಡುಗು-ಮಿಂಚು ಸಹಿತ ಜೋರು ಮಳೆ

    ಹವಾಮಾನ ಇಲಾಖೆ ಏಪ್ರಿಲ್ 21ರಿಂದ ರಾಜ್ಯದಲ್ಲಿ ಮೂರು ದಿನ ವ್ಯಾಪಕ ಮಳೆಯಾಗಲಿದೆ ಎಂದು ಮುನ್ಸೂಚನೆಯನ್ನು ನೀಡಿದೆ. ಈ ಹಿನ್ನೆಲೆ ಜನರು ಎಚ್ಚರಿಕೆಯಿಂದಿರಬೇಕೆಂಬ ಸಂದೇಶವನ್ನು ರವಾನಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Karnataka Rains Alert: ರಾಜ್ಯದ ಜನರೇ ಗಮನಿಸಿ, ಏಪ್ರಿಲ್ 21ರಿಂದ ಮೂರು ದಿನ ಗುಡುಗು-ಮಿಂಚು ಸಹಿತ ಜೋರು ಮಳೆ

    ಅಬ್ಬಾ ಬಿಸಿಲು ಎನ್ನುತ್ತಿರುವ ಜನರಿಗೆ ತಂಪೆರೆಯಲು ವರುಣದೇವ ರಾಜ್ಯಕ್ಕೆ ಬರುತ್ತಿದ್ದಾನೆ. ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಲಿದೆ ಎಂದು ಹೇಳಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Karnataka Rains Alert: ರಾಜ್ಯದ ಜನರೇ ಗಮನಿಸಿ, ಏಪ್ರಿಲ್ 21ರಿಂದ ಮೂರು ದಿನ ಗುಡುಗು-ಮಿಂಚು ಸಹಿತ ಜೋರು ಮಳೆ

    ಇನ್ನು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಲಿದೆ. ಈ ವೇಳೆ ಕರಾವಳಿ ಭಾಗದಲ್ಲಿ ಗಾಳಿಯ ವೇಗ ಸಹ ಹೆಚ್ಚಾಗುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Karnataka Rains Alert: ರಾಜ್ಯದ ಜನರೇ ಗಮನಿಸಿ, ಏಪ್ರಿಲ್ 21ರಿಂದ ಮೂರು ದಿನ ಗುಡುಗು-ಮಿಂಚು ಸಹಿತ ಜೋರು ಮಳೆ

    ಉತ್ತರ ಒಳನಾಡು ಭಾಗದಲ್ಲಿ ತಾಪಮಾನ ಕೊಂಚ ಇಳಿಕೆಯಾಗಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಗಳಿವೆ. ಮಲೆನಾಡು ಭಾಗದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Karnataka Rains Alert: ರಾಜ್ಯದ ಜನರೇ ಗಮನಿಸಿ, ಏಪ್ರಿಲ್ 21ರಿಂದ ಮೂರು ದಿನ ಗುಡುಗು-ಮಿಂಚು ಸಹಿತ ಜೋರು ಮಳೆ

    ಕಳೆದ ಒಂದು ತಿಂಗಳಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದಿಢೀರ್ ಆಲಿಕಲ್ಲು ಮಳೆಯಾಗುತ್ತಿದೆ. ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಜೋರು ಗಾಳಿ ಬೀಸುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Karnataka Rains Alert: ರಾಜ್ಯದ ಜನರೇ ಗಮನಿಸಿ, ಏಪ್ರಿಲ್ 21ರಿಂದ ಮೂರು ದಿನ ಗುಡುಗು-ಮಿಂಚು ಸಹಿತ ಜೋರು ಮಳೆ

    ಎರಡು ದಿನಗಳ ಹಿಂದೆ ಸಮುದ್ರ ಮಟ್ಟದಲ್ಲಿಯ ಹವಾಮಾನ ಕುಸಿತವಾಗಿದ್ದರಿಂದ ಛತ್ತೀಸ್​ಗಢ ಭಾಗದಲ್ಲಿ ಸೃಷ್ಟಿಯಾಗಿದ್ದ ಸುಳಿಗಾಗಿ ಕೇರಳ ಮಾರ್ಗವಾಗಿ ಜಾರ್ಖಂಡ್, ಓರಿಸ್ಸಾ ಮತ್ತು ತಮಿಳುನಾಡು ಕರಾವಳಿ ಮೂಲಕ ಹಾದು ಹೋಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Karnataka Rains Alert: ರಾಜ್ಯದ ಜನರೇ ಗಮನಿಸಿ, ಏಪ್ರಿಲ್ 21ರಿಂದ ಮೂರು ದಿನ ಗುಡುಗು-ಮಿಂಚು ಸಹಿತ ಜೋರು ಮಳೆ

    ಈ ಸುಳಿಗಾಳಿಯ ಪರಿಣಾಮ ರಾಜ್ಯದಲ್ಲಿ ಏಪ್ರಿಲ್ 21 ರಿಂದ 23ರವರೆಗೆ ಮಳೆಯ ವಾತಾವರಣ ನಿರ್ಮಾಣವಾಗಿದೆ. ಮೊದಲ ದಿನ ಮಳೆ ಸಾಧಾರಣವಾಗಿರಲಿದ್ದು, ನಂತರದ ಎರಡು ದಿನ ವ್ಯಾಪಕವಾಗಲಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Karnataka Rains Alert: ರಾಜ್ಯದ ಜನರೇ ಗಮನಿಸಿ, ಏಪ್ರಿಲ್ 21ರಿಂದ ಮೂರು ದಿನ ಗುಡುಗು-ಮಿಂಚು ಸಹಿತ ಜೋರು ಮಳೆ

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ಕೊಡಗು, ಶಿವಮೊಗ್ಗದಲ್ಲಿ ವ್ಯಾಪಕ ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES