Traffic Rules: ಸೀಟ್ ಬೆಲ್ಟ್ ಹಾಕದಿದ್ರೆ ಬೀಳುತ್ತೆ ಭಾರೀ ದಂಡ! ಟ್ರಾಫಿಕ್ ಪೊಲೀಸರ ಆದೇಶ ಸಾಮಾನ್ಯವಾಗಿ ನಾವು ಕಾರಿನಲ್ಲಿ ಪ್ರಯಾಣಿಸುವಾಗ ಪಕ್ಕದಲ್ಲಿಯೇ ಸೀಟ್ ಬೆಲ್ಟ್ ಇದ್ದರೂ ಅದನ್ನು ಹಾಕಿಕೊಳ್ಳುವುದಿಲ್ಲ. ಆದ್ರೆ ಅಪಘಾತಗಳನ್ನು ನೋಡಿದ ಮೇಲೆ ನಮಗೆ ಮೊದಲು ಅನಿಸುವುದೇ ಅರೇ ಕಾರಿನಲ್ಲಿರುವ ಪ್ರತಿಯೊಬ್ಬರು ಸೀಟ್ ಬೆಲ್ಟ್ ಧರಿಸಿದ್ದರೆ ಸಾವಿನ ಸಂಖ್ಯೆ ಕಡಿಮೆ ಆಗುತ್ತದೆ ಎಂದು. ಇನ್ಮುಂದೆ ಸೀಟ್ ಬೆಲ್ಟ್ ಹಾಕದಿದ್ರೆ ಭಾರೀ ದಂಡ ಬೀಳೋದು ಗ್ಯಾರೆಂಟಿ.
1 / 7
ಸೀಟ್ ಬೆಲ್ಟ್ ಧರಿಸುವಂತೆ ಪೊಲೀಸರು ಜಾಗೃತಿ ಮೂಡಿಸಿದ್ರು. ಜನ ತಲೆಕೆಡಿಸಿಕೊಳ್ಳೋದಿಲ್ಲಾ ಹೀಗಾಗಿ ಪೊಲೀಸರು ದಂಡದ ಚಾಟಿ ಬೀಸಿದ್ದಾರೆ.
2 / 7
ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ ಎಚ್ಚರ. ಒಂದು ಸಾವಿರ ರೂಪಾಯಿ ದಂಡ ವಿಧಿಸಲು ಆದೇಶ ನೀಡಲಾಗಿದೆ.
3 / 7
ದಂಡದ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವವರ ವಿರುದ್ಧ 1000 ರೂ ದಂಡ ವಿಧಿಸಲು ಆದೇಶ ನೀಡಲಾಗಿದೆ.
4 / 7
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಆದೇಶ ನೀಡಿದೆ. ರಾಜ್ಯದ ಎಲ್ಲಾ ಕಮೀಷನರೇಟ್ ಮತ್ತು ಎಸ್ ಪಿಗಳಿಗೆ ಆದೇಶ ರವಾನೆಯಾಗಿದೆ.
5 / 7
ಈ ಮೊದಲು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ 500ರೂ ದಂಡ ಹಾಕಲಾಗುತ್ತಿತ್ತು. ಇದೀಗ ದಂಡದ ಬೆಲೆ ಏರಿಕೆ ಮಾಡಲಾಗಿದೆ.
6 / 7
ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಂಡದ ನಿಯಮ ಜಾರಿಗೆ ತರಲಾಗಿದೆ.
7 / 7
ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದ್ರೆ ಅಪಘಾತದಲ್ಲಿ ಇದರಿಂದ ಸಾವು ನೋವು ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರದಿಂದ ಹೊಸ ಆದೇಶ.
First published: October 19, 2022, 16:45 IST