ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಆಡಳಿತ ನಡೆಸಿದಾಗ ನಾನು ಯಾವುದೇ ಭ್ರಷ್ಟಚಾರ ನಡೆಸಿದ್ದಲ್ಲ. ನನ್ನ ಆಡಳಿತದಲ್ಲಿ ಅಂತಹ ಭ್ರಷ್ಟಚಾರ ಇದ್ರೆ ದಾಖಲೆ ಸಮೇತ ಬಿಡುಗಡೆ ಮಾಡಿ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸಚಿವ ಅಶ್ವತ್ಥ್ ನಾರಾಯಣ್ಗೆ ಸವಾಲು ಹಾಕಿದ್ದಾರೆ.
2/ 8
ಕುಮಾರಸ್ವಾಮಿ ಅವರ ಸರ್ಕಾರದಲ್ಲೂ ಹಗರಣಗಳಾಗಿವೆ. ಮುಂದಿನ ದಿನಗಳಲ್ಲಿ ಅವು ಹೊರಬರುತ್ತವೆ ಎಂಬ ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ತಿರುಗೇಟು ನೀಡಿ ಮಾತನಾಡಿದ ಅವರು, ನನ್ನ ಆಡಳಿತದಲ್ಲಿ ಒಂದು ಹಗರಣಗಳಿದ್ರೆ, ಕಾನೂನು ಬಾಹಿರ ಚಟುವಟಿಕೆ ಮಾಡಿದ್ರೆ ತೋರಿಸಲಿ ಎಂದರು.
3/ 8
ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆಗೆ ಕೊಂಚ ಖಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ನನ್ನ ಸರ್ಕಾರದಲ್ಲಿ ಒಂದು ಹಗರಣ ನಡೆದಿದ್ರೆ ತೋರಿಸಲಿ ಎಂದರು.
4/ 8
ನಮ್ಮ ಆಡಳಿತದಲ್ಲಿದ್ದಾಗ ಇವರ ರೀತಿ 40 ಪರ್ಸೆಂಟ್ ಲೂಟಿ ಮಾಡಬೇಕು. ನಿಮ್ಮ ರೀತಿ ದೇಶ ಲೂಟಿ ಮಾಡಬೇಕಿತ್ತಾ. ಅಸಿಸ್ಟಂಟ್ ಪ್ರೋಫೆಸರ್ಗಳ ನೇಮಕವನ್ನು ನಿಮ್ಮ ಇಲಾಖೆಯಲ್ಲಿ ಯಾವ ಮಾನದಂಡದಲ್ಲಿ ಆಯ್ಕೆ ಮಾಡಲಾಗಿದೆ.
5/ 8
400 ಕೋಟಿ ಭ್ರಷ್ಟಚಾರ ಮಾಡಿದ್ದಾರೆ. ನಿಮ್ಮಂತಹವರಿಂದ ನಾನು ರಾಜಕೀಯ ಕಲಿಯಬೇಕಿಲ್ಲ. ಸುಳ್ಳು ಆರೋಪ ಮಾಡುವ ಮುನ್ನ ಎಚ್ಚರವಿರಲಿ. ನನ್ನ ಬಳಿ ಎಲ್ಲ ಮಾಹಿತಿ ಇದೆ.
6/ 8
ನನ್ನ ವಿರುದ್ಧ ಏನೇ ದಾಖಲೆ ಇದ್ದರೂ ಬಿಡುಗಡೆ ಮಾಡಲಿ. ನಿಮಗೆ ತಾಕತ್ ಇದ್ದರೆ ನಾಳೆ ಬೆಳಗ್ಗೆಯೇ ದಾಖಲಾಗಿ ಬಿಡುಗಡೆ ಮಾಡಿ. ನನ್ನ ಬಳಿ ಇರುವ ದಾಖಲತಿ ನಿಮ್ಮ ಬಳಿ ಇಲ್ಲ. ಮಾಡನಾಡುವ ಮುನ್ನ ಎಚ್ಚರಿಕಯಿಂದ ಮಾತಾಡಿ ಎಂದು ಎಚ್ಚರಿಕೆ ನೀಡಿದರು.
7/ 8
ಇನ್ನು ಇದೇ ವೇಳೆ ಐಪಿಎಸ್ ಅಧಿಕಾರಿ ಪಿ ರವೀಂದ್ರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ನಿಷ್ಠಾವಂತ ಅಧಿಕಾರಿಯ ಅವಧಿಪೂರ್ವ ವರ್ಗಾವಣೆಗೆ ಕಿಡಿಕಾರಿದ್ದಾರೆ.
8/ 8
ಎಲ್ಲಿಂದ, ಯಾರು, ಯಾರ ಮೇಲೆ ಒತ್ತಡ ಹೇರಿದ್ದಾರೆ? ಸರ್ಕಾರ ಯಾವುದೆ ಕಾರಣಕ್ಕೂ ದಕ್ಷ ಅಧಿಕಾರಿಯ ರಾಜೀನಾಮೆ ಅಂಗೀಕರಿಸಬಾರದು ಎಂದರು.