ಮಾಜಿ #LuckyDipCMHDK ಅವರಿಗೆ ಇದೇ ಬದುಕು ತಾನೇ? BJP ವ್ಯಂಗ್ಯ
ಕಳೆದ ನಾಲ್ಕೈದು ದಿನಗಳಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಅವರು ಬಿಜೆಪಿ ಸರ್ಕಾರ(BJP Government)ವನ್ನು ಅತ್ಯಂತ ಕಟು ಪದಗಳಲ್ಲಿ ಟೀಕಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದರು. ಇದೀಗ ಬಿಜೆಪಿ ಟ್ವೀಟ್ (Tweet) ಮೂಲಕ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ.
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿಯ ಟ್ವಿಟರ್ ದಾಳಿ ಮುಂದುವರಿದಿದೆ. ಇಂದು ಕುಮಾರಸ್ವಾಮಿ ಅವರನ್ನು ಗಾಳಿಪಟದ ರಾಜಕಾರಣಿ ಎಂದ ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
2/ 7
ನೀವೆಷ್ಟೇ ದಾರ್ಶನಿಕನ ಸೋಗು ಹಾಕಿದರೂ ಅದರ ಹಿಂದಿರುವುದು ಪ್ರತ್ಯೇಕ ಲೆಕ್ಕಾಚಾರವೇ. ನಿಮ್ಮಂತವರ ಯೂಟರ್ನ್ ನೀತಿಗಾಗಿಯೇ ಕಗ್ಗದಲ್ಲಿ ಸಾಲೊಂದು ರಚಿತವಾಗಿದೆ ಎಂದು ಹೇಳಿದೆ.
3/ 7
ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ..? ಮೀನು ನೀರೊಳು ನುಸುಳೆ ಪಥನಿಯಮವಿಹುದೆ..? ಏನೊ ಜೀವನವನೆಳೆವುದೇನೊ ನೂಕುವುದದನು. ನೀನೊಂದು ಗಾಳಿಪಟ ಮಂಕುತಿಮ್ಮ..।। ಎಂದು ಬರೆದು ಡಿವಿಜಿ ಅವರ ಸಾಲುಗಳ ಮೂಲಕ ತಿರುಗೇಟು ನೀಡಿದೆ.
4/ 7
ಹೆಚ್ಡಿಕೆ ಎಂದರೆ ಗಾಳಿಪಟ, ಸ್ವಂತಿಕೆ ಇಲ್ಲದ ರಾಜಕಾರಣಿ. ಕರ್ನಾಟಕದ ರಾಜಕಾರಣದಲ್ಲಿ ಎಚ್ಡಿಕೆ ಅವರಂತಹ ಗಾಳಿಪಟದ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ಮತ್ತೊಬ್ಬರಿಲ್ಲ ಎಂದು ಜರಿದಿದೆ.
5/ 7
ಆವ ಕಡೆ ಹಾರುವುದೋ! ಆವ ಕಡೆ ತಿರುಗುವುದೋ? ಆವಾಗಳಾವ ಕಡೆಗೆರಗುವುದೋ ಹಕ್ಕಿ! ಎಂಬಂತಿದೆ ಎಚ್ಡಿಕೆ ರಾಜಕೀಯ ಧೋರಣೆ. ಸ್ವಂತಿಕೆ ಇಲ್ಲದವರು ವಾಜಪೇಯಿ ಅವರಂಥವರನ್ನೂ ಟೀಕಿಸುವುದು ಚೋದ್ಯವಲ್ಲದೆ ಮತ್ತೇನು ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
6/ 7
ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು । ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು ॥ ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು.. |ಮಾಜಿ #LuckyDipCMHDK ಅವರಿಗೆ ಇದೇ ಬದುಕು ತಾನೇ ಎಂದು ವ್ಯಂಗ್ಯ ಮಾಡಿದೆ.
7/ 7
ಬಿಜೆಪಿ ಎಂದರೆ ಭಾರತೀಯ ಜನತಾ ಪಕ್ಷವಲ್ಲ, ಬಡವರ ರಕ್ತಹೀರಿ ಸಿರಿವಂತರ ಖಜಾನೆ ಭರ್ತಿ ಮಾಡುವ ʼಬಲ್ಲಿದ ಜನರ ಪಕ್ಷʼ. ಬೆಲೆ ಶೂಲದಿಂದ ಬಡಜನರನ್ನು ಬರ್ಬಾದ್ ಮಾಡುತ್ತಿರುವ ಪಕ್ಷ ಎಂದು ಕುಮಾರಸ್ಚಾಮಿ ವಾಗ್ದಾಳಿ ನಡೆಸಿದ್ದರು.