Karnataka Elections: ಹಾಸನದಲ್ಲಿ ಕಣಕ್ಕಿಳಿಯುವವರು ಯಾರು? ರೆಡಿಯಾಯ್ತು ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್!

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲ ಸಮಯಷ್ಟೇ ಬಾಕಿ ಉಳಿದಿದೆ. ಹೀಗಿರುವಾಗ ಜೆಡಿಸೆ್​ನಲ್ಲಿ ಹಾಸನ ಕ್ಷೇತ್ರ ವಿಚಾರವಾಗಿ ಗೊಂದಲ ಮತ್ತಷ್ಟು ಮುಂದುವರೆದಿದೆ. ಒಂದೆಡೆ ರೇವಣ್ಣ ಫ್ಯಾಮಿಲಿ ಹಠಕ್ಕೆ ಬಿದ್ದು ಇಲ್ಲಿ ಪ್ರಚಾರ ನಡೆಸುತ್ತಿದ್ದರೆ, ಅತ್ತ ಕುಮಾರಸ್ವಾಮಿ ಈ ಗೊಂದಲಕ್ಕೆ ಪರಿಹಾರ ಹುಡುಕುತ್ತದ್ದಾರೆ. ಸದ್ಯ ಕುಮಾರಸ್ವಾಮಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

First published:

 • 19

  Karnataka Elections: ಹಾಸನದಲ್ಲಿ ಕಣಕ್ಕಿಳಿಯುವವರು ಯಾರು? ರೆಡಿಯಾಯ್ತು ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್!

  ಹೌದು ಹಾಸನ ಕ್ಷೇತ್ರದ ಜೆಡಿಎಸ್ ಟಿಕೆ ಟ್ ಗೊಂದಲ‌ ಗೊಂದಲಕ್ಕೆ ತೆರೆ ಎಳೆಯಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಹಾಸನ ಕ್ಷೇತ್ರದ ಪ್ರಮುಖ ಕಾರ್ಯಕರ್ತರು,ಮುಖಂಡರ ಸಭೆ ಕರೆದಿದ್ದಾರೆ.

  MORE
  GALLERIES

 • 29

  Karnataka Elections: ಹಾಸನದಲ್ಲಿ ಕಣಕ್ಕಿಳಿಯುವವರು ಯಾರು? ರೆಡಿಯಾಯ್ತು ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್!

  ಭಾನುವಾರ ಬೆಂಗಳೂರಿನಲ್ಲಿ ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ಅಭಿಪ್ರಾಯ ಸಂಗ್ರಹ ನಡೆಯಲಿದೆ. ಹೀಗಿರುವಾಗ ಮಾಜಿ ಜಿಪಂ‌ ಸದಸ್ಯರು, ತಾಪಂ ಮಾಜಿ ಸದಸ್ಯರು, ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಮುಖರ ಸಭೆ ಕರೆಯಲಾಗಿದೆ.

  MORE
  GALLERIES

 • 39

  Karnataka Elections: ಹಾಸನದಲ್ಲಿ ಕಣಕ್ಕಿಳಿಯುವವರು ಯಾರು? ರೆಡಿಯಾಯ್ತು ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್!

  ಕುಮಾರಸ್ವಾಮಿ ಕಚೇರಿಯಿಂದಲೇ ಹಾಸನದ ಪ್ರಮುಖ ಕಾರ್ಯಕರ್ತರಿಗೆ ಬುಲಾವ್ ನೀಡಲಾಗಿದ್ದು, ಖುದ್ದು ಕುಮಾರಸ್ವಾಮಿ ಕಛೇರಿಯಿಂದ ಫೋನ್ ಮಾಡಿ ಸಭೆಗೆ ಆಹ್ವಾನ ನೀಡಲಾರಂಭಿಸಿದ್ದಾರೆ.

  MORE
  GALLERIES

 • 49

  Karnataka Elections: ಹಾಸನದಲ್ಲಿ ಕಣಕ್ಕಿಳಿಯುವವರು ಯಾರು? ರೆಡಿಯಾಯ್ತು ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್!

  ಕುಮಾರಸ್ವಾಮಿ ಸುಮಾರು 300 ಜನ ಪ್ರಮುಖರ ಸಭೆ ಕರೆದಿದ್ದಾರೆ ಎನ್ನಲಾಗಿದೆ. ಇನ್ನು ಕುಮಾರಸ್ವಾಮಿ ಸದ್ಯ ಚಿಕ್ಕಮಗಳೂರಿನಲ್ಲಿ ನಡೆಯುತ್ತಿರೊ ಪಂಚರತ್ನ ಯಾತ್ರೆಯಲ್ಲಿದ್ದು, ಬಳಿಕ ಬೆಂಗಳೂರಿನ ಸಭೆಗೆ ಹಾಜರಾಲಿದ್ದಾರೆ.

  MORE
  GALLERIES

 • 59

  Karnataka Elections: ಹಾಸನದಲ್ಲಿ ಕಣಕ್ಕಿಳಿಯುವವರು ಯಾರು? ರೆಡಿಯಾಯ್ತು ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್!

  ಸಭೆಯಲ್ಲಿ ಅಭ್ಯರ್ಥಿ ಯಾರಾದರೆ ಗೆಲುವು ಸುಲಭವಾಗಲಿದೆ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹ ನಡೆಯಲಿದೆ. ಎಲ್ಲಾ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಹಾಸನ ಟಿಕೆಟ್ ಬಗ್ಗೆ ತೀರ್ಮಾನ ಮಾಡಲು ತಂತ್ರ ರೂಪಿಸಿದ್ದಾರೆ ಕುಮಾರಸ್ವಾಮಿ.

  MORE
  GALLERIES

 • 69

  Karnataka Elections: ಹಾಸನದಲ್ಲಿ ಕಣಕ್ಕಿಳಿಯುವವರು ಯಾರು? ರೆಡಿಯಾಯ್ತು ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್!

  ಇನ್ನೊಂದೆಡೆ ಕುಮಾರಸ್ವಾಮಿ ಹಾಸನ ಕ್ಷೇತ್ರದ ಬಗ್ಗೆ ಗೌಪ್ಯ ಸರ್ವೆ ಮಾಡಿಸಿ ವರದಿ ತರಿಸಿಕೊಂಡಿದ್ದಾರೆ. ಗೌಪ್ಯ ವರದಿ ಫಲಿತಾಂಶ ಹಾಗೂ ಪ್ರಮುಖರ ಅಭಿಪ್ರಾಯ ಎರಡನ್ನೂ ಆಧರಿಸಿ ಕುಮಾರಸ್ವಾಮಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ.

  MORE
  GALLERIES

 • 79

  Karnataka Elections: ಹಾಸನದಲ್ಲಿ ಕಣಕ್ಕಿಳಿಯುವವರು ಯಾರು? ರೆಡಿಯಾಯ್ತು ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್!

  ಈವರೆಗೆ ಭವಾನಿ ರೇವಣ್ಣಗೆ ಟಿಕೆಟ್ ಬೇಡ ಎಂದೇ ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ಆದರೂ ಅತ್ತ ರೇವಣ್ಣ ಹಾಗೂ ಫ್ಯಾಮಿಲಿ ಮಾತ್ರ ಇದೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳದೇ ಕ್ಷೇತ್ರದಲ್ಲಿ ಪ್ರಚಾರ ಮುಂದುವರೆಸಿದ್ದಾರೆ.

  MORE
  GALLERIES

 • 89

  Karnataka Elections: ಹಾಸನದಲ್ಲಿ ಕಣಕ್ಕಿಳಿಯುವವರು ಯಾರು? ರೆಡಿಯಾಯ್ತು ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್!

  ಅತ್ತ ಸ್ವರೂಪ್ ಕೂಡಾ ಹಾಸನ ಕ್ಷೇತ್ರದಲ್ಲಿ ತಾವೇ ಆಕಾಂಕ್ಷಿ ಎಂದು ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಅಲ್ಲದೇ ಖುದ್ದು ಕುಮಾರಸ್ವಾಮಿ ಸ್ವರೂಪ್ ಬೆನ್ನಿಗೆ ನಿಂತಿದ್ದಾರೆ ಎಂಬುವುದು ಗಮನಿಸಬೇಕಾದ ವಿಚಾರ.

  MORE
  GALLERIES

 • 99

  Karnataka Elections: ಹಾಸನದಲ್ಲಿ ಕಣಕ್ಕಿಳಿಯುವವರು ಯಾರು? ರೆಡಿಯಾಯ್ತು ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್!

  ಸದ್ಯ ಭಾನುವಾರದಂದು ನಡೆಯಲಿರುವ ಜೆಡಿಎಸ್​ ಗಣ್ಯರ ಸಭೆಯಲ್ಲಿ ಈ ಗೊಂದಲಕ್ಕೆ ಒಂದು ಕೊನೆ ಸಿಗುವ ಸಾಧ್ಯತೆ ಇದೆ. ಈ ಸಭೆಯಲ್ಲೇ ಹಾಸನ ಕ್ಷೇತ್ರದಲ್ಲಿ ಟಿಕೆಟ್​ ಯಾರಿಗೆ ಸಿಗಲಿದೆ ಎಂಬುವುದು ಅಂತಿಮಗೊಳ್ಳಲಿದೆ.

  MORE
  GALLERIES