ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಪುಣ್ಯ ಕ್ಷೇತ್ರ. ಹಿಂದೂ-ಜೈನ ಧರ್ಮದ ಸಂಗಮ ಇಲ್ಲಿನ ವಿಶೇಷ. ನೇತ್ರಾವತಿ ನದಿ ದಡದಲ್ಲಿರುವ ಈ ಕ್ಷೇತ್ರಕ್ಕೆ ಪ್ರತಿನಿತ್ಯ ಅಸಂಖ್ಯಾತ ಭಕ್ತರು ಭೇಟಿ ನೀಡಿ, ಮಂಜುನಾಥ ಸ್ವಾಮಿ ದರ್ಶನ ಪಡೆಯುತ್ತಾರೆ. ಇಲ್ಲಿನ ಅನ್ನ ಪ್ರಸಾದ ಸ್ವೀಕರಿಸಿ ಪುನೀತರಾಗುತ್ತಾರೆ. ಇದು ಬೆಂಗಳೂರಿನಿಂದ ಸುಮಾರು 309 ಕಿಲೋ ಮೀಟರ್ ದೂರದಲ್ಲಿದೆ. (ಕೃಪೆ: Internet)
ಮುರ್ಡೇಶ್ವರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಪುಣ್ಯ ಕ್ಷೇತ್ರ. ಕಂದುಕ ಬೆಟ್ಟದ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ ಮತ್ತು ಮೂರು ಕಡೆ ಅರಬ್ಬಿ ಸಮುದ್ರದ ನೀರಿನಿಂದ ಆವೃತವಾಗಿದೆ. ದೇವಾಲಯವು 20 ಅಂತಸ್ತಿನ ಗೋಪುರವನ್ನು ಹೊಂದಿದೆ ಮತ್ತು 123 ಅಡಿ ಎತ್ತರದ ಶಿವನ ಭವ್ಯ ಮೂರ್ತಿ ಇದ್ದು, ಇದು ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಇದು ಬೆಂಗಳೂರಿನಿಂದ ಸುಮಾರು 500 ಕಿಲೋ ಮೀಟರ್ ದೂರದಲ್ಲಿದೆ. (ಕೃಪೆ: Internet)
ಗೋಕರ್ಣ: ಮಹಾಬಲೇಶ್ವರನ ನೆಲೆಯಾಗಿರುವ ಇದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದೆ. ಸಮುದ್ರ ತಟದಲ್ಲಿರುವ ಗೋಕರ್ಣದ ಮಹಾಬಲೇಶ್ವರ ದೇವಾಲಯವು ದೇಶದ ಎಲ್ಲ ಹಿಂದೂ ಭಕ್ತರಿಗೆ ಪುಣ್ಯ ಸ್ಥಳ. ಕಾಶಿ, ರಾಮೇಶ್ವರ ಹಾಗೂ ಗೋಕರ್ಣ ತ್ರಿಸ್ಥಲ ಶೈವಕ್ಷೇತ್ರಗಳೆಂದೇ ಖ್ಯಾತವಾಗಿವೆ. ಇಲ್ಲಿನ ಕೋಟಿ ತೀರ್ಥದಲ್ಲಿ ಅತಿ ಹೆಚ್ಚು ಪಿತೃಕಾರ್ಯಗಳು ನಡೆಯುತ್ತವೆ. ಇದು ಬೆಂಗಳೂರಿನಿಂದ ಸುಮಾರು 487 ಕಿಲೋ ಮೀಟರ್ ದೂರದಲ್ಲಿದೆ. (ಕೃಪೆ: Internet)
ನಂಜನಗೂಡು: ಮೈಸೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಇದೂ ಒಂದು. ಶ್ರೀಕಂಠೇಶ್ವರ ದೇವಾಲಯವು ಕಪಿಲಾ ನದಿಯ ಬಲದಂಡೆ ಮೇಲಿದೆ. ನಂಜನಗೂಡನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ. 11ನೇ ಶತಮಾನದಲ್ಲಿ ಚೋಳರಿಂದ ಈ ದೇವಾಲಯ ವಿಸ್ತರಣೆಗೊಂಡಿತೆಂದು ಹೇಳಲಾಗಿದೆ. ಸುಮಾರು 385 ಅಡಿ ಉದ್ದ, 160 ಅಡಿ ಅಗಲದ ಈ ದೇವಾಲಯದಲ್ಲಿ 140ಕ್ಕೂ ಹೆಚ್ಚು ಕಂಬಗಳ ಸಂಕೀರ್ಣವಿದೆ. ಇದು ಬೆಂಗಳೂರಿನಿಂದ ಸುಮಾರು 163 ಕಿಲೋ ಮೀಟರ್ ದೂರದಲ್ಲಿದೆ. (ಕೃಪೆ: Internet)
ಕೋಟಿ ಲಿಂಗೇಶ್ವರ: ಇದು ಕೋಲಾರ ಜಿಲ್ಲೆಯ ಕಮ್ಮಸಂದ್ರ ಗ್ರಾಮದಲ್ಲಿದೆ. 108 ಅಡಿ ಎತ್ತರದ ಬೃಹತ್ ಲಿಂಗ ಮತ್ತು 35 ಅಡಿ ಎತ್ತರದ ನಂದಿ ವಿಗ್ರಹವನ್ನು ವೇದಿಕೆಯ ಮೇಲೆ ಸ್ಥಾಪಿಸಲಾಗಿದೆ. 15 ಎಕರೆ ವಿಸ್ತಾರದ ಈ ಕ್ಷೇತ್ರದಲ್ಲಿ ಕೋಟಿಗಳ ಸಂಖ್ಯೆಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಲಾಗುತ್ತಿದೆ. ವಿಶ್ವದಲ್ಲೇ ಅತಿ ಎತ್ತರದ ಅಂದರೆ 33 ಮೀಟರ್ ಇರುವ ಶಿವಲಿಂಗ (108 ಅಡಿ) ಹಾಗೂ ನಂದೀಶ್ವರ (35 ಅಡಿ) ಇರುವ ಖ್ಯಾತಿ ಇಲ್ಲಿನದು. ಇದು ಬೆಂಗಳೂರಿನಿಂದ ಸುಮಾರು 96 ಕಿಲೋ ಮೀಟರ್ ದೂರದಲ್ಲಿದೆ. (ಕೃಪೆ: Internet)
ಹಂಪಿ ವಿರೂಪಾಕ್ಷ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಈ ದೇಗುಲವಿದೆ. ತುಂಗಭದ್ರಾ ನದಿಯ ದಡದಲ್ಲಿರುವ ಭಗವಾನ್ ಶಿವನ ರೂಪವಾದ ವಿರೂಪಾಕ್ಷ ದೇವರಿಗೆ ಸಮರ್ಪಿತವಾಗಿದೆ. ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾಯಿತು ಮತ್ತು ಕರ್ನಾಟಕದಲ್ಲಿ ನೋಡಲೇಬೇಕಾದ ಸ್ಥಳವಾಗಿದೆ. ಇದು ಬೆಂಗಳೂರಿನಿಂದ ಸುಮಾರು 341 ಕಿಲೋ ಮೀಟರ್ ದೂರದಲ್ಲಿದೆ. (ಕೃಪೆ: Internet)
ಕುದ್ರೋಳಿ: ಮಂಗಳೂರಿನ ಕುದ್ರೋಳಿಯಲ್ಲಿರುವ ಶಿವನಿಗೆ ಮುಡಿಪಾದ ಗೋಕರ್ಣನಾಥೇಶ್ವರನ ದೇವಸ್ಥಾನವಿದೆ. ಮಂಗಳೂರಿನಲ್ಲಿ ಕಂಡುಬರುವ ದೇವಾಲಯಗಳ ಪೈಕಿ ಇದು ಇತ್ತೀಚಿಗಷ್ಟೆ ನಿರ್ಮಾಣಗೊಂಡ ದೇವಾಲಯವಾಗಿದೆ. ನಾರಯಣ ಗುರು ಎಂಬ ಆಧ್ಯಾತ್ಮಿಕ ಸಂತರಿಂದ ಈ ದೇವಾಲಯದ ಪರಿಕಲ್ಪನೆ ಮೂಡಿ ಬಂದಿದೆ. ಇದು ಬೆಂಗಳೂರಿನಿಂದ ಸುಮಾರು 487 ಕಿಲೋ ಮೀಟರ್ ದೂರದಲ್ಲಿದೆ. (ಕೃಪೆ: Internet)
ಬನವಾಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಪ್ರಸಿದ್ಧ ಕ್ಷೇತ್ರ. ಇದು ಕನ್ನಡದ ಮೊದಲ ರಾಜಮನೆತನವಾದ ಕದಂಬರ ರಾಜಧಾನಿಯಾಗಿತ್ತು. ಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇನ್ನೂ ಹಲವು ದೇವತೆಗಳ ಮೂರ್ತಿಗಳು ಕಾಣಸಿಗುವುದು. ಇದು ಬೆಂಗಳೂರಿನಿಂದ ಸುಮಾರು 389 ಕಿಲೋ ಮೀಟರ್ ದೂರದಲ್ಲಿದೆ. (ಕೃಪೆ: Internet)