ಹಾಸನದಿಂದ MLC Electionಗೆ ಸ್ಪರ್ಧಿಸಿರುವ ಡಾ.ಸೂರಜ್ ರೇವಣ್ಣ ಆಸ್ತಿ ಎಷ್ಟು ಕೋಟಿ ಗೊತ್ತಾ?

MLC Electionಗೆ ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಡಾ.ಸೂರಜ್ ರೇವಣ್ಣ (Dr. Suraj Revanna) ಸ್ಪರ್ಧಿಸುತ್ತಿದ್ದಾರೆ. ಇಂದು ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಾಮಪತ್ರದ ಜೊತೆ ತಮ್ಮ ಆಸ್ತಿಯ ವಿವರವನ್ನು ದೇವೇಗೌಡರ ಮೊಮ್ಮಗ ಸಲ್ಲಿಸಿದ್ದಾರೆ.

First published:

  • 17

    ಹಾಸನದಿಂದ MLC Electionಗೆ ಸ್ಪರ್ಧಿಸಿರುವ ಡಾ.ಸೂರಜ್ ರೇವಣ್ಣ ಆಸ್ತಿ ಎಷ್ಟು ಕೋಟಿ ಗೊತ್ತಾ?

    ಅಫಿಡೆವಿಟ್ ನಲ್ಲಿ ಸೂರಜ್ ರೇವಣ್ಣ ಸಲ್ಲಿಸಿರುವ ಆಸ್ತಿ ವಿವರ ಹೀಗಿದೆ. 3,53,16,463 ರೂ. ಚರಾಸ್ಥಿ, ಸ್ಥಿರಾಸ್ತಿ 61,68,28,761 ರೂಪಾಯಿಗಳು ಎಂದು ಸೂರಜ್ ರೇವಣ್ಣ ಘೋಷಿಸಿಕೊಂಡಿದ್ದಾರೆ.

    MORE
    GALLERIES

  • 27

    ಹಾಸನದಿಂದ MLC Electionಗೆ ಸ್ಪರ್ಧಿಸಿರುವ ಡಾ.ಸೂರಜ್ ರೇವಣ್ಣ ಆಸ್ತಿ ಎಷ್ಟು ಕೋಟಿ ಗೊತ್ತಾ?

    ತಾತಾ ದೇವೇಗೌಡರು, ಅಜ್ಜಿ ಚನ್ನಮ್ಮ, ಅತ್ತೆಯರು, ಅಪ್ಪ-ಅಮ್ಮನಿಂದ 14,97,74,989 ರೂ. ಸಾಲ ಪಡೆದಿದ್ದಾರೆ. ಉಡುಗೊರೆಯಾಗಿ ನೀಡಿರುವ ಬೆಳ್ಳಿ ವಸ್ತುಗಳು ಒಟ್ಟು 12 ಕೆಜಿ. ಸೂರಜ್ ಬಳಿಯಿರುವ ಚಿನ್ನಾಭರಣಗಳು 1 ಕೆಜಿ ಚಿನ್ನ, 6 ಕೆಜಿ ಬೆಳ್ಳಿ. ಒಂದು ಟ್ರ್ಯಾಕ್ಟರ್ ಇದ್ದು, 36 ಹಸು, 6 ಎತ್ತು, 8 ಎಮ್ಮೆಗಳಿವೆ ಎಂದು ದಾಖಲೆಯಲ್ಲಿ ತಿಳಿಸಿದ್ದಾರೆ.

    MORE
    GALLERIES

  • 37

    ಹಾಸನದಿಂದ MLC Electionಗೆ ಸ್ಪರ್ಧಿಸಿರುವ ಡಾ.ಸೂರಜ್ ರೇವಣ್ಣ ಆಸ್ತಿ ಎಷ್ಟು ಕೋಟಿ ಗೊತ್ತಾ?

    ದೇವೇಗೌಡರದ್ದು ಕುಟುಂಬ ರಾಜಕಾರಣ ಎಂಬ ಪ್ರತಿಪಕ್ಷಗಳ ಟೀಕೆಗೆ ಇಂದು ಸೂರಜ್ ರೇವಣ್ಣ ತಿರುಗೇಟು ನೀಡಿದರು. ಬೆಳಗಾವಿಯಿಂದ ಕನಕಪುರದವರೆಗೂ ತಗೊಳ್ಳಿ, ಒಂದೊಂದು ಕುಟುಂಬದಲ್ಲಿ ಎಷ್ಟೆಷ್ಟು ಜನ ಇದ್ದಾರೆ ಅಂಥಾ ಲೆಕ್ಕ ಹಾಕಿ. ನಾನು ಹೆಸರು ಹೇಳಲು ಬಯಸಲ್ಲ.

    MORE
    GALLERIES

  • 47

    ಹಾಸನದಿಂದ MLC Electionಗೆ ಸ್ಪರ್ಧಿಸಿರುವ ಡಾ.ಸೂರಜ್ ರೇವಣ್ಣ ಆಸ್ತಿ ಎಷ್ಟು ಕೋಟಿ ಗೊತ್ತಾ?

    ಶಿವಮೊಗ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಇದ್ದಿದ್ದೇ ಅದು. ಕುಟುಂಬ ರಾಜಕಾರಣ ಅಂಥಾ ನೀವು ಹೊಸದಾಗಿ ಹೇಳುತ್ತಿದ್ದೀರಾ. ಇಪ್ಪತ್ತು ವರ್ಷದಿಂದ ಕುಟುಂಬ ರಾಜಕಾರಣ ಅಜೆಂಡಾನೇ ಇರೋದು. ದೇವೇಗೌಡರ ಕುಟುಂಬ ಬಂದಾಗ ಮಾತ್ರ ಕುಟುಂಬ ರಾಜಕಾರಣ ತರ್ತಾರೆ. ಎಲ್ಲಾ ರಾಜಕೀಯ ವ್ಯಕ್ತಿಗಳ ಮನೆಯಲ್ಲಿ ನಾಲ್ಕೈದು ಜನ ಇದ್ದಾರೆ ಎಂದರು.

    MORE
    GALLERIES

  • 57

    ಹಾಸನದಿಂದ MLC Electionಗೆ ಸ್ಪರ್ಧಿಸಿರುವ ಡಾ.ಸೂರಜ್ ರೇವಣ್ಣ ಆಸ್ತಿ ಎಷ್ಟು ಕೋಟಿ ಗೊತ್ತಾ?

    ನಮ್ಮ ತಾತ ಅವರು ಧೃಡವಾದ ನಿರ್ಧಾರ ತಗೊಂಡು ನನ್ನ ಅಭ್ಯರ್ಥಿ ಮಾಡಿದ್ದಾರೆ. ಸುಮಾರು ಐವತ್ತು ವರ್ಷಗಳಿಂದ ನಮ್ಮ ಕುಟುಂಬ ರಾಜ್ಯ, ಜಿಲ್ಲೆಯಲ್ಲಿ ಕಳಕಳಿಯಿಂದ ಕೆಲಸ ಮಾಡಿಕೊಂಡು ಬರುತ್ತಿದೆ. ಅದನ್ನು ಮುಂದುವರಿಸಿಕೊಂಡು ಹೋಗಲು ನನಗೂ ಅವಕಾಶ ಕೊಡಿ ಎಂದು ಎಲ್ಲಾ ಸದಸ್ಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

    MORE
    GALLERIES

  • 67

    ಹಾಸನದಿಂದ MLC Electionಗೆ ಸ್ಪರ್ಧಿಸಿರುವ ಡಾ.ಸೂರಜ್ ರೇವಣ್ಣ ಆಸ್ತಿ ಎಷ್ಟು ಕೋಟಿ ಗೊತ್ತಾ?

    ನಾನು ಅನಿರೀಕ್ಷಿತವಾಗಿ ಅಭ್ಯರ್ಥಿಯಾಗಿದ್ದೇನೆ, ನಾನು ಅಭ್ಯರ್ಥಿಯಾಗುವ ಅಪೇಕ್ಷೆ ಇರಲಿಲ್ಲ.ಐದಾರು ವರ್ಷದಿಂದ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ.

    MORE
    GALLERIES

  • 77

    ಹಾಸನದಿಂದ MLC Electionಗೆ ಸ್ಪರ್ಧಿಸಿರುವ ಡಾ.ಸೂರಜ್ ರೇವಣ್ಣ ಆಸ್ತಿ ಎಷ್ಟು ಕೋಟಿ ಗೊತ್ತಾ?

    ಅದು ಮೇಲ್ಮನೆಯಾಗಲಿ, ಕೆಳಮನೆಯಾಗಲಿ ಕಾರ್ಯಕರ್ತರಿಗೂ ಅವಕಾಶ ಮಾಡಿಕೊಟ್ಟರು. ನಿಮ್ಮ ಕುಟುಂಬದಿಂದ ಅಭ್ಯರ್ಥಿಯಾಗಬೇಕು ಎಂಬುದು ಒಂದೇ ಕಾರ್ಯಕರ್ತರ ಕೂಗಾಗಿತ್ತು ಎಂದು ಸಮರ್ಥನೆ ನೀಡಿದರು.

    MORE
    GALLERIES