PHOTOS: ಹೇಮಾವತಿ ಹೊಡೆತಕ್ಕೆ ನಲುಗಿದ ಸಕಲೇಶಪುರ; ಮನೆಗಳು ಸಂಪೂರ್ಣ ಜಲಾವೃತ ಹಾಸನದ ಹೇಮಾವತಿ ನದಿಯಿಂದ ಹೊರಹರಿವು ಹೆಚ್ಚಾದ ಹಿನ್ನೆಲೆ, ಸಕಲೇಶಪುರ ನಗರ ಸಂಪೂರ್ಣ ಜಲಾವೃತವಾಗಿದೆ. ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಪಟ್ಟಣದ ಎಲ್ಲಾ ರಸ್ತೆಗಳಲ್ಲೂ ನೀರು ಉಕ್ಕಿ ಹರಿಯುತ್ತಿದೆ. ನೂರಾರು ಎಕರೆ ಪ್ರದೇಶದಲ್ಲಿನ ಅಡಿಕೆ, ಶುಂಠಿ,ರಾಗಿ, ಜೋಳ ಸೇರಿ ಹಲವು ಬೆಳೆಗಳು ನಾಶವಾಗಿವೆ. ಚಿತ್ರಕೃಪೆ: ಬಲ್ಲುಪೇಟೆ ಜಗನ್ನಾಥ್ News18 | August 10, 2019, 15:19 IST
1 / 15
ಹೇಮಾವತಿ ನದಿಯ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಸಕಲೇಶಪುರದ ಹೊಳೆಮಲ್ಲೇಶ್ವರ ದೇವಾಲಯ ಸಂಪೂರ್ಣ ಜಲಾವೃತವಾಗಿದೆ.
2 / 15
ಹೇಮಾವತಿಯ ಆರ್ಭಟಕ್ಕೆ ಇಡೀ ಸಕಲೇಶಪುರ ನಗರ ಸಂಪೂರ್ಣ ಜಲಾವೃತವಾಗಿದೆ.
3 / 15
ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ಸಕಲೇಶಪುರದ ಮನೆ-ಮಠಗಳಿಗೆ ನೀರು ನುಗ್ಗಿದೆ.
4 / 15
ಸಕಲೇಶಪುರದ ಹೊಳೆ ಮಲ್ಲೇಶ್ವರ ದೇಗುಲ ಸಂಪೂರ್ಣ ಮುಳುಗಡೆಯಾಗಿರುವುದು.
5 / 15
ಹೇಮಾವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸಕಲೇಶಪುರದ ಜನರು ಆತಂಕದಲ್ಲಿದ್ದಾರೆ.
6 / 15
ಹೇಮಾವತಿಯ ಒಡಲು ದೊಡ್ಡದಾಗುತ್ತಿದ್ದು, ಇಡೀ ನಗರವೇ ಜಲಾವೃತವಾಗುತ್ತಿದೆ.
7 / 15
ಹೇಮಾವತಿಯ ರಭಸಕ್ಕೆ ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
8 / 15
ಭಾಗಶಃ ಕಟ್ಟಡ ಮಳೆ ನೀರಿಗೆ ಮುಳುಗಡೆಯಾಗಿರುವ ದೃಶ್ಯ
9 / 15
ಸಕಲೇಶಪುರದಲ್ಲಿ ಅಂಗಡಿ-ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿರುವ ದೃಶ್ಯ
10 / 15
ಹೇಮಾವತಿಯ ಆರ್ಭಟಕ್ಕೆ ಜಲಾವೃತವಾಗಿರುವ ಸಕಲೇಶಪುರದ ಮನೆಗಳು
11 / 15
ಕಟ್ಟಡದ ಕೆಳ ಅಂತಸ್ತು ಸಂಪೂರ್ಣ ಜಲಾವೃತವಾಗಿದ್ದು, ಜನರು ಮೇಲಂತಸ್ತಿನಲ್ಲಿ ರಕ್ಷಣೆ ಪಡೆಯುತ್ತಿರುವ ದೃಶ್ಯ
12 / 15
ಹೇಮಾವತಿ ನದಿಯ ಹರಿವು ಗಂಟೆ-ಗಂಟೆಗೂ ಹೆಚ್ಚಾಗುತ್ತಿದ್ದು, ಇಡೀ ಸಕಲೇಶಪುರ ನಗರ ಮುಳುಗಡೆಯಾಗಿದೆ.
13 / 15
ಮನೆಗಳಿಗೆ ನೀರು ನುಗ್ಗಿರುವ ದೃಶ್ಯ
14 / 15
ಸಕಲೇಶಪುರ ನಗರದ ಅಂಗಡಿ-ಮುಗ್ಗಟ್ಟುಗಳಿಗೆ ನೀರು ನುಗ್ಗಿರುವ ದೃಶ್ಯ
15 / 15
ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
First published: August 10, 2019, 15:19 IST