HD Kumaraswamy And Garlands: ಕುಮಾರಸ್ವಾಮಿಗೆ ಕೊತ್ತಂಬರಿ ಸೊಪ್ಪು, ಚಕೋತಾ ಹಾರಗಳು; ಫೋಟೋಗಳಲ್ಲಿ
ಹಾರ ಅನ್ನೋದು ಕೇವಲ ಹೂವಿನಿಂದ ಮಾಡಲ್ಪಟ್ಟಿರುತ್ತೆ ಅನ್ನೋದು ಸುಳ್ಳಾಗಿದೆ. ಈ ಮೊದಲು ಗಂಧದ ಹೂವು, ತುಳಸಿ ಮಾಲೆ ಸೇರಿದಂತೆ ಬೆರಳಣಿಕೆಯಲ್ಲಿ ಬಗೆ ಬಗೆಯ ಹಾರಗಳು ಕಾಣುತ್ತಿದ್ದವು. ಆದ್ರೆ ಈಗ ಟ್ರೆಂಡ್ ಬದಲಾಗಿದೆ. ರಾಜಕೀಯ ಸಮಾರಂಭಗಳಲ್ಲಿ ವಿವಿಧ ಹಾರಗಳು ನೋಡಲು ಸಿಗುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಆರಂಭಿಸಿದೆ. ಕೋಲಾರದಿಂದ ಆರಂಭವಾದ ಯಾತ್ರೆ ಮುಂದುವರಿದಿದೆ.
2/ 9
ಪ್ರತಿ ಗ್ರಾಮಗಳಿಗೆ ತೆರಳಿದಾಗಲೂ ಅಲ್ಲಿಯ ಜೆಡಿಎಸ್ ಅಭಿಮಾನಿಗಳು ವಿವಿಧ ತರಕಾರಿ, ಹಣ್ಣುಗಳಿಂದ ತಯಾರಿಸಲಾದ ಹಾರವನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅರ್ಪಿಸುತ್ತಿದ್ದಾರೆ.
3/ 9
ಮುಳಬಾಗಿಲಿನಲ್ಲಿ ಸೇಬು, ಮಾಲೂರಿನಲ್ಲಿ ಹೂ, ಕ್ಯಾಲನೂರು ಗ್ರಾಮದಲ್ಲಿ ಚೆಂಡು ಹೂವಿನ ಹಾರ ಹಾಕಲಾಗಿತ್ತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಿತ್ತಳೆ ಮತ್ತು ಸೇಬು ಮಿಶ್ರಿತ ಹಾರವನ್ನು ಹಾಕಲಾಗಿತ್ತು.
4/ 9
ಚಿಕ್ಕಬಳ್ಳಾಪುರದಲ್ಲಿ ಸೇಬು, ತಿಪ್ಪೇನಹಳ್ಳಿ ಗ್ರಾಮದಲ್ಲಿ ದೊಡ್ಡ ಮೆಣಸಿನಕಾಯಿ , ದೇವನಹಳ್ಳಿಯಲ್ಲಿ ಚಕೋತ, ವೆಂಕಟಗಿರಿ ಕೋಟೆಯಲ್ಲಿ ದ್ರಾಕ್ಷಿ, ಬಿಜ್ಜವಾರದಲ್ಲಿ ಬಜ್ಜಿ ಮೆಣಸಿನಕಾಯಿಗಳಿಂದ ಹಾರವನ್ನು ಸಿದ್ಧಪಡಿಸಲಾಗಿತ್ತು.
5/ 9
ಹಾರೋಹಳ್ಳಿ ದ್ರಾಕ್ಷಿ, ದೊಡ್ಡಬಳ್ಳಾಪುರದಲ್ಲಿ ಮೂಸಂಬಿ, ನೆಲಮಂಗಲದಲ್ಲಿ ಗುಲಾಬಿ, ತುಮಕೂರು ಅಮರಜ್ಯೋತಿ ನಗರದಲ್ಲಿ ಕೊಬ್ಬರಿಗಳಿಂದ ಹಾರವನ್ನು ಮಾಡಲಾಗಿತ್ತು.
6/ 9
ಶಿರಾ ಗೇಟ್ ಬಳಿ ರಾಗಿಯಿಂದ ಸುಂದರವಾಗಿ ಹಾರ ಮಾಡಲಾಗಿತ್ತು. ಮಧುಗಿರಿಯಲ್ಲಿ ಕಡಲೆಕಾಯಿ, ಕೊರಟಗೆರೆಯಲ್ಲಿ ಕಿತ್ತಳೆ ಹಾಗೂ ಆಲೂಗಡ್ಡೆಯ ಹಾರ ಮಾಡಲಾಗಿತ್ತು.
7/ 9
ಪಾವಗಡದಲ್ಲಿ ಅನಾನಸ್, ಕೆಂಚಗಾನಹಳ್ಳಿ ಗ್ರಾಮದಲ್ಲಿ ಕೊತ್ತಂಬರಿ ಸೊಪ್ಪಿನ ಹಾರವನ್ನು ಮಾಡಲಾಗಿತ್ತು.