PHOTOS: ಗಣೇಶ ಮೂರ್ತಿಯ ವಿವಿಧ ಭಂಗಿಗಳು ಇಲ್ಲಿವೆ ನೋಡಿ

ಮನೆಯೊಂದರಲ್ಲಿ ಗಣೇಶನ ಮೂರ್ತಿಗಳು ಎಷ್ಟಿರುತ್ತವೆ? ಪೂಜೆಗೆ ಎಷ್ಟು ಬೇಕೋ ಅಷ್ಟು. ಇಲ್ಲವೇ ಗೋಡೆ ಮೇಲೊಂದು, ಮತ್ತೊಂದು ಮೂರ್ತಿ ಇರೋದು ನೋಡಿದ್ದೇವೆ. ಆದರೆ ಗಣಿನಾಡು ಬಳ್ಳಾರಿಯ ಈ ಮನೆ ತುಂಬೆಲ್ಲ ಗಣೇಶನ ಮೂರ್ತಿಗಳೇ. ಈ ಮನೆಯೊಳಗೆ ಎಂಟ್ರಿ ಕೊಟ್ಟರೆ ಒಂದಲ್ಲ ಎರಡಲ್ಲ ಬರೋಬ್ಬರಿ ಐನೂರಕ್ಕೂ ಹೆಚ್ಚು ಗಣಪನ ಮೂರ್ತಿಗಳಿವೆ. ಇದು ಅಚ್ಚರಿಯಾದ್ರೂ ನಿಜ. ಈ ಕಾರಣಕ್ಕಾಗಿಯೇ ಈ ಮನೆ ಇದೀಗ ಗಣೇಶನ ಮ್ಯೂಸಿಯಂ ಎಂದು ಹೆಸರುವಾಸಿಯಾಗಿದೆ. ಜಾತಿ-ಮತ-ಪಂಥಗಳನ್ನು ಮೀರಿ ಆರಾಧಿಸಲ್ಪಡುವ ಏಕೈಕ ದೈವವೆಂದರೆ ಅದು ಗಣೇಶ ಮಾತ್ರ. ಇಲ್ಲಿಯ ಜೈನ ಸಮುದಾಯದವರ ಮನೆಯಲ್ಲಿ ನಾನಾ ಭಂಗಿಗಳಲ್ಲಿ ವಿರಾಜಮಾನವಾಗಿರುವ ಗಣೇಶನನ್ನು ನೋಡುವುದೇ ಮಹಾದಾನಂದ. ಇಲ್ಲಿ ಗಣಪತಿಯದ್ದೆ ದರ್ಬಾರ್. ಮನೆಯ ಯಾವುದೇ ಭಾಗದಲ್ಲಿ ಕಣ್ಣಾಡಿಸಿದರೂ ಅಲ್ಲಿ ಗಣೇಶ ಕಣ್ಣಿಗೆ ಬಿದ್ದೇ ಬೀಳ್ತಾನೆ. ಇಲ್ಲಿವೆ ನೋಡಿ ಗಣೇಶನ ವಿವಿಧ ಬಂಗಿಗಳು

  • News18
  • |
First published: