ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕಳ್ಳಕವಟಗಿಯಲ್ಲಿ ಸೆಪ್ಟೆಂಬರ್ 22ರಂದು ಈ ಘಟನೆ ನಡೆದಿತ್ತು. ಅಪ್ರಾಪ್ತ ಪ್ರಿಯತಮೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡದ್ರೆ, ಯುವಕನಿಗೆ ಬಲವಂತವಾಗಿ ವಿಷ ಪ್ರಾಷಾಣ ಮಾಡಿಸಲಾಗಿದೆ.
2/ 9
ತಿಕೋಟ ತಾಲೂಕಿನ ಕಳ್ಳಕವಟಗಿಯ ಅಪ್ರಾಪ್ತ ಯುವತಿ ಹಾಗೂ ಘೊಣಸಗಿಯ ಮಲ್ಲು ಜಮಖಂಡಿ ಮಧ್ಯೆ ಪ್ರೇಮಾಂಕುರವಾಗಿತ್ತು. ಒಂದೇ ಬಸ್ನಲ್ಲಿ ವಿಜಯಪುರಕ್ಕೆ ಕಾಲೇಜಿಗೆ ತೆರಳುತ್ತಿದ್ದರು. (ಆರೋಪಿ ಗುರಪ್ಪ)
3/ 9
ಅಕ್ಕಪಕ್ಕದ ಊರಿನವರು ಆಗಿದ್ದರಿಂದ ಪರಿಚಯವಾಗಿತ್ತು. ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ವಿಹರಿಸಿದ್ದರು.
4/ 9
ಇಬ್ಬರ ಪ್ರೇಮ ವಿಚಾರ ಎರಡೂ ಕುಟುಂಬಸ್ಥರಿಗೆ ಸಹ ತಿಳಿದಿತ್ತು. ಈ ವಿಷಯ ತಿಳಿದ ಕೂಡಲೇ ಇಬ್ಬರನ್ನುಇ ಪೋಷಕರು ದೂರ ಮಾಡಿದ್ದರು. ಈ ಸಂಬಂಧ ಎರಡೂ ಕುಟುಂಬಗಳ ನಡುವೆಯೂ ಗಲಾಟೆ ಆಗಿತ್ತು ಎಂದು ತಿಳಿದು ಬಂದಿದೆ. (ಆರೋಪಿ)
5/ 9
ಗಲಾಟೆಯಾದ ಬಳಿಕ ಅಪ್ರಾಪ್ತೆ ಗೆಳೆಯ ಮಲ್ಲುನನ್ನು ಮನೆಗೆ ಸೆಪ್ಟೆಂಬರ್ 22ರ ರಾತ್ರಿ ಕರೆಸಿಕೊಂಡಿದ್ದಳು. ಇಬ್ಬರು ಏಕಾಂತದಲ್ಲಿರುವಾಗ ಅಪ್ರಾಪ್ತೆ ತಂದೆ ಗುರಪ್ಪನ ಕೈಗೆ ತಗ್ಲಾಕೊಂಡಿದ್ದಾರೆ.
6/ 9
ಈ ವೇಳೆ ಅಪ್ರಾಪ್ತೆ ತಂದೆ ಇಬ್ಬರಿಗೂ ಬುದ್ಧಿ ಹೇಳಿದ್ದರಂತೆ. ಆದರೆ ಈ ಘಟನೆಯಿಂದ ನೊಂದ ಅಪ್ರಾಪ್ತೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
7/ 9
ಮಗಳ ಸಾವಿಗೆ ಆಕೆಯ ಗೆಳೆಯನೇ ಕಾರಣ ಎಂದು ಕೋಪಗೊಂಡ ಅಪ್ರಾಪ್ತೆ ತಂದೆ ಯುವಕನ ಕೈಕಾಲುಗಳನ್ನು ಕಟ್ಟಿ ಅದೇ ವಿಷವನ್ನು ಕುಡಿಸಿದ್ದನು. ನಂತರ ಮಗಳು ಮತ್ತು ಯುವಕನ ಶವವನ್ನು ಪ್ರತ್ಯೇಕವಾಗಿ ಚೀಲದಲ್ಲಿ ತುಂಬಿ ಕೃಷ್ಣಾ ನದಿಗೆ ಎಸೆದಿದ್ದರು.
8/ 9
ಬಾಗಲಕೋಟೆ ಜಿಲ್ಲೆ ಬೀಳಗಿ ಠಾಣೆ ವ್ಯಾಪ್ತಿಯಲ್ಲಿ ಮಲ್ಲು ಶವ ಪತ್ತೆಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
9/ 9
ಪ್ರಕರಣ ಸಂಬಂಧ ಗುರುಪ್ಪ ಮತ್ತು ಆತನ ಅಳಿಯ ಅಜಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆಯ ಶವಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.