Gas Leak: ಹನ್ಮಾವು ಕ್ರಾಸ್ ಸುತ್ತಲಿನ ಮನೆಗಳಲ್ಲಿ ಒಲೆ, ಲೈಟ್ ಹಚ್ಚದಂತೆ ಪೊಲೀಸರ ಮನವಿ; ಕಾರಣ ಇಲ್ಲಿದೆ
ಹನ್ಮಾವು ಕ್ರಾಸ್ ಬಳಿ ಗ್ಯಾಸ್ ಟ್ಯಾಂಕರ್(Gas Tanker) ಪಲ್ಟಿಯಾದ ಹಿನ್ನೆಲೆ, ಅನಿಲ ಸೋರಿಕೆಯಾಗಿರಬಹುದೆಂಬ(Gas Leak) ಶಂಕೆಯಿಂದ ಗ್ಯಾಸ್, ಒಲೆ, ಲೈಟ್ ಹಚ್ಚದಂತೆ ಪೊಲೀಸರು(Police) ಮನವಿ ಮಾಡಿದ್ದಾರೆ.
ಹನ್ಮಾವು ಕ್ರಾಸ್ ಬಳಿ ಗ್ಯಾಸ್ ಟ್ಯಾಂಕರ್(Gas Tanker) ಪಲ್ಟಿಯಾದ ಹಿನ್ನೆಲೆ, ಅನಿಲ ಸೋರಿಕೆಯಾಗಿರಬಹುದೆಂಬ(Gas Leak) ಶಂಕೆಯಿಂದ ಗ್ಯಾಸ್, ಒಲೆ, ಲೈಟ್ ಹಚ್ಚದಂತೆ ಪೊಲೀಸರು(Police) ಮನವಿ ಮಾಡಿದ್ದಾರೆ.
2/ 5
ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹನ್ಮಾವು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
3/ 5
ಗ್ಯಾಸ್ ಟ್ಯಾಂಕರ್ ಪಲ್ಟಿಯಿಂದಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಅಂಕೋಲಾ ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
4/ 5
ಪಲ್ಟಿಯಾದ ಗ್ಯಾಸ್ ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗದಂತೆ ಅಗ್ನಿಶಾಮಕ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮ ವಹಿಸುತ್ತಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
5/ 5
ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಹೆದ್ದಾರಿ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಗ್ಯಾಸ್ ಸೋರಿಕೆ ಆಗಿರಬಹುದೆಂಬ ಶಂಕೆಯಿಂದ ಸುತ್ತಮುತ್ತಲಿನ ಮನೆಗಳಲ್ಲಿ ಒಲೆ, ಗ್ಯಾಸ್, ಲೈಟ್ಗಳನ್ನು ಹಚ್ಚದಂತೆ ಪೊಲೀಸರು ಮನವಿ ಮಾಡಿದ್ದಾರೆ.