ಗಾಲಿ ಜನಾರ್ಧನ ರೆಡ್ಡಿ ಅವರು ಮೊಮ್ಮಗಳಿಗಾಗಿ ಬರೆದಿರುವ ಕವನ ಹೀಗಿದೆ... ಮುದ್ದು ಮೊಗದವಳು, ಹಾಲು ಗಲ್ಲದವಳು ನನ್ನ ಮೊಮ್ಮಗಳು. ಅವಳ ಮೊದಲ ವರ್ಷದ ಹುಟ್ಟು ಹಬ್ಬದ ಹರ್ಷ, ನಮ್ಮ ಮನೆ ಮಂದಿಗೆಲ್ಲಾ ತಂದಿದೆ, ಆನಂದದ ಸ್ಪರ್ಷ, ತನ್ನ ಪುಟ್ಟ, ಪುಟ್ಟ ಕಾಲುಗಳಿಂದ ಅಂಬೆಗಾಲು ಇಟ್ಟು, ಆಟ, ಓಟದ ಅವಳ ಚಂದದ ನಗು ನಮ್ಮ ಮನೆ, ಮನವ ಬೆಳಗಿದೆ. ಅವಳ ಓಟ, ಆಟದಲ್ಲಿ ಆ ಒಂದು ವರ್ಷ ನಮಗರಿವಿಲ್ಲದ ಹಾಗೆ ಕಳೆದಿದೆ. ಈಗ ನನ್ನ ಮೊಮ್ಮಗಳು ಭ್ರಮರ 12ನೇ ತಾರೀಖಿಗೆ ಒಂದು ವರ್ಷ ತುಂಬಿದವಳು. ಅವಳಿಗೆ ನನ್ನ ತುಂಬು ಹೃದಯದ ಜನ್ಮ ದಿನದ ಹಾರ್ದಿಕ ಶುಭಾಶಯಗಳು.