Bengaluru Airport: ಇನ್ಮುಂದೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗಿ; ಎಷ್ಟು ದರ?
ಬೆಂಗಳೂರು ನಗರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಸುಮಾರು 90 ನಿಮಿಷ ಸಮಯ ಬೇಕಾಗುರತ್ತದೆ. ಕೆಲವೊಮ್ಮೆ ಟ್ರಾಫಿಕ್ ನಲ್ಲಿ ಸಿಲುಕಿಕೊಂಡ್ರೆ ಈ ಸಮಯ ಮತ್ತಷ್ಟು ಹೆಚ್ಚಾಗಬಹುದು. ಈ ಹಿನ್ನೆಲೆ ಕಂಪನಿಯೊಂದು ಹೆಲಿಕಾಪ್ಟರ್ ಸೇವೆ ನೀಡಲು ಮುಂದಾಗಿದೆ. (ಸಾಂದರ್ಭಿಕ ಚಿತ್ರ)
ಜುಲೈ ತಿಂಗಳಿನಿಂದ ಹೆಲಿಕಾಪ್ಟರ್ ಸೇವೆ ಆರಂಭವಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ಹಳೆಯ ಹೆಚ್ಎಎಲ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬಹುದಾಗಿದೆ. (ಸಾಂದರ್ಭಿಕ ಚಿತ್ರ)
2/ 8
ಈ ಹೆಲಿಪೋರ್ಟ್ ಸೇವೆಯನ್ನು ಒದಗಿಲು ಬ್ಲೇಡ್ ಇಂಡಿಯಾ ಕಂಪನಿ ಮುಂದಾಗಿದೆ. ಈ ಸೇವೆ ಪಡೆಯಲು ಪ್ರಯಾಣಿಕರು ಒಂದು ಕಡೆ ಪಯಣಕ್ಕೆ 4,000 ರೂ. ಪಾವತಿಸಬೇಕು ಎಂದು ಕಂಪನಿಯ ನಿರ್ದೇಶಕರಾದ ಪಾಯಲ್ ಸತೀಶ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
3/ 8
ಮೂರು ವರ್ಷಗಳ ಹಿಂದೆ ಥಂಬಿ ಏವಿಯೇಷನ್ ಹೆಲಿಪೋರ್ಟ್ ಸೇವೆಯನ್ನು ನೀಡುತ್ತಿತ್ತು. ಆದ್ರೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾದ ಹಿನ್ನೆಲೆ ಸೇವೆಯನ್ನು ಥಂಬಿ ಏವಿಯೇಷನ್ ನಿಲ್ಲಿಸಿತ್ತು. ಇದೀಗ ಬ್ಲೇಡ್ ಇಂಡಿಯಾ ಕಂಪನಿ ಮುಂದಾಗಿದೆ. (ಸಾಂದರ್ಭಿಕ ಚಿತ್ರ)
4/ 8
ಮೂರು ವರ್ಷಗಳ ಹಿಂದೆ ಹೆಲಿಪೋರ್ಟ್ ಸೇವೆಗೆ ಪ್ರೋತ್ಸಾಹದ ಕೊರತೆ ಉಂಟಾಗಿತ್ತು. ಹೆಲಿಕಾಪ್ಟರ್ ಗಳಿಂದಾಗಿ ಬೇರೆ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ನಿರ್ವಹಣೆಯ ಸಮಸ್ಯೆಯಿಂದ ಈ ಸೇವೆ ರದ್ದುಗೊಂಡಿತ್ತು. (ಸಾಂದರ್ಭಿಕ ಚಿತ್ರ)
5/ 8
ಸದ್ಯ ಬ್ಲೇಡ್ ಇಂಡಿಯಾ ಕಂಪನಿ ನಾಲ್ಕು ಚಾಪರ್ ಗಳನ್ನು ಹೊಂದಿದೆ. ಮುಂಬೈ ಮತ್ತು ಪುಣೆ, ಅಂಬಿ ವ್ಯಾಲಿ, ಶಿಲ್ಲಿಮ್ ಮತ್ತು ಶಿರಡಿ ನಡುವೆ ಸಂಚಾರ ನಡೆಸುತ್ತಿದೆ. (ಸಾಂದರ್ಭಿಕ ಚಿತ್ರ)
6/ 8
ಬೆಂಗಳೂರಿನ ಜಕ್ಕೂರ ಏರ್ ಡ್ರೋಮ್ ನಿಂದ ಕೊಡಗು ಅಥವಾ ಕಬಿನಿಗೆ ಏರ್ ಟ್ರಿಪ್ ಸಹ ಬ್ಲೇಡ್ ಇಂಡಿಯಾ ಕಂಪನಿ ಆಯೋಜಿಸುತ್ತಿದೆ. ವಾರದಲ್ಲಿ ಆರು ದಿನ ಈ ಸೇವೆ ಪ್ರಯಾಣಿಕರಿಗೆ ಲಭ್ಯ ಇರಲಿದೆ. (ಸಾಂದರ್ಭಿಕ ಚಿತ್ರ)
7/ 8
ಬೆಂಗಳೂರಿನಿಂದ ಕೊಡಗಿಗೆ ಹೆಲಿಕಾಪ್ಟರ್ ನಲ್ಲಿ ಸಂಚರಿಸಲು ಕಂಪನಿ 16,000 ರೂ. (ಒಂದು ಕಡೆ ಪ್ರಯಾಣಕ್ಕೆ ಮಾತ್ರ) ನಿಗದಿ ಮಾಡಿದೆ. ಇದು ಸೋಮವಾರದಿಂದ ಶುಕ್ರವಾರದವರೆಗೆ ಹೆಲಿಕಾಪ್ಟರ್ ಗಳು ಸಂಚರಿಸಲಿವೆ. (ಸಾಂದರ್ಭಿಕ ಚಿತ್ರ)
8/ 8
ಇದರ ಜೊತೆ ಮೈಸೂರು ಟ್ರಿಪ್ ಸಹ ಆಯೋಜನೆ ಮಾಡಲಾಗುತ್ತಿದೆ. ಮೈಸೂರು ಟ್ರಿಪ್ ಗೆ 12 ಸಾವಿರ ರೂ. ನಿಗದಿ ಮಾಡಲಾಗಿದೆ ಎಂದು ಪಾಯಲ್ ಸತೀಶ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)