Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!

ಒಮ್ಮೆಲೆ ಹೆಚ್ಚಿನ ಜನರು ಬಂದು ರಷ್ ಇರುವ ಜಾಗವನ್ನೇ ಟಾರ್ಗೆಟ್ ಮಾಡಿರುವ ಆಸಾಮಿಗಳು, ಒಬ್ಬರೇ ಪೊಲೀಸ್ ಸಿಬ್ಬಂದಿ ಇದ್ದಾಗ ಜಾಸ್ತಿ ಜನ ಇರುವುದನ್ನು ಕಂಡು ಮುಗಿಬಿದ್ದು ಹಣ ಕಟ್ಟಲು ಮುಂದಾಗಿದ್ದಾರೆ. ಈ ವೇಳೆ ಫೈನ್ ಕಟ್ಟಿದ ರಶೀದಿ ತಗೊಂಡು ಹಣ ಕೊಡದೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

First published:

  • 17

    Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!

    ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರು ದಂಡ ಕಟ್ಟಲು ಸರ್ಕಾರ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಲಾಗಿತ್ತು. ಇದೀಗ ದಂಡ ಪಾವತಿಗೆ ಇನ್ನಷ್ಟು ಸಮಯ ವಿಸ್ತರಣೆ ಮಾಡಬೇಕು ಎಂದು ಕೂಗು ಕೇಳಿಬಂದ ಬಳಿಕ ಸರ್ಕಾರ ಮತ್ತೆ ದಂಡ ಪಾವತಿ ಅವಧಿ ವಿಸ್ತರಣೆಗೆ ಅಸ್ತು ಎಂದಿದೆ. ಈ ನಡುವೆ ದಂಡ ಕಟ್ಟುತ್ತಿರುವವರ ಕಳ್ಳಾಟ ಕೂಡ ಬಯಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!

    ದಂಡ ಕಟ್ಟಲು ಹೆಚ್ಚು ಜನ ಸೇರಿದ ಕಡೆ ಕೆಲ ಕಿಡಿಗೇಡಿಗಳು ಪೊಲೀಸರಿಂದ ಕೇವಲ ರಶೀದಿ ಪಡೆದು ಹಣ ಕಟ್ಟದೇ ಮಾಯವಾಗಿದ್ದಾರಂತೆ. ಜನಜಂಗುಳಿ ಇರುವ ಕಾರಣ ಪೊಲೀಸರು ಕೂಡ ರಶೀದಿ ನೀಡಿ ಹಣ ಪಡೆಯೋದನ್ನು ಮರೆತಿದ್ದಾರೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!

    ಇದರಿಂದ ಪೊಲೀಸರೆ ತಮ್ಮ ಕೈನಿಂದ ಹಣ ಕಟ್ಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಾಕಷ್ಟು ಜನ 50% ಟ್ರಾಫಿಕ್ ಫೈನ್ ಕಟ್ಟಿ ನಿರಾಳರಾಗಿದ್ದಾರೆ. ಟ್ರಾಫಿಕ್ ಫೈನ್ ವಸೂಲಿ ಮಾಡಿದ ಪೊಲೀಸರಿಗೆ ಮಾತ್ರ ಹೊಸ ತಲೆನೋವು ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!

    ಏಕೆಂದರೆ ಪೊಲೀಸರು ತಮ್ಮ ಕೈಯಿಂದಲೇ ಹೋಗಿದೆ ಸಾವಿರ ಸಾವಿರ ರೂಪಾಯಿಗಳ ಫೈನ್ ತುಂಬಿದ್ದಾರೆ. ಹೌದು, ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಕಿಲಾಡಿಗಳು ಪೊಲೀಸರಿಗೆ ಪಂಗನಾಮ ಹಾಕಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!

    ಒಮ್ಮೆಲೆ ಹೆಚ್ಚಿನ ಜನರು ಬಂದು ರಷ್ ಇರುವ ಜಾಗವನ್ನೇ ಟಾರ್ಗೆಟ್ ಮಾಡಿರುವ ಆಸಾಮಿಗಳು, ಒಬ್ಬರೇ ಪೊಲೀಸ್ ಸಿಬ್ಬಂದಿ ಇದ್ದಾಗ ಜಾಸ್ತಿ ಜನ ಇರುವುದನ್ನು ಕಂಡು ಮುಗಿಬಿದ್ದು ಹಣ ಕಟ್ಟಲು ಮುಂದಾಗಿದ್ದಾರೆ. ಈ ವೇಳೆ ಫೈನ್ ಕಟ್ಟಿದ ರಶೀದಿ ತಗೊಂಡು ಹಣ ಕೊಡದೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಕೊನೆಗೆ ಪೊಲೀಸರೆ ದಂಡದ ಮೊತ್ತ ಲೆಕ್ಕ ಕಟ್ಟುವಾಗ ವಂಚನೆ ಆಗಿರುವ ಘಟನೆ ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!

    ಸಾಕಾಷ್ಟು ಜನ ಪೊಲೀಸರಿಗೆ ಯಾಮಾರಿಸುವುದು ಈಗ ಗೊತ್ತಾಗಿದೆ. ಇನ್ನೊಂದೆಡೆ ಕೌಂಟರ್ ಗಳನ್ನ ಓಪನ್ ಮಾಡಿ ಪೊಲೀಸರು ಕೆಲ ಸಿಬ್ಬಂದಿಗಳನ್ನು ನೇಮಿಸಿ ಹಣ ಕಟ್ಟಿಸಿಕೊಂಡಿದ್ದರು. ಆದರೆ ಒಬ್ಬರೇ ಹಣ ಕಲೆಕ್ಟ್ ಮಾಡುವಾಗ ಗೊಂದಲದಲ್ಲಿ ರಿಸಿಪ್ಟ್ ಕಲೆಕ್ಟ್ ಮಾಡಿ ಹಣ ಕೊಡದೆ ಹಲವರು ಹೋಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!

    ಇನ್ನೂ ಕೆಲವರು ಕ್ಯಾಶ್ ಚೇಂಜ್ ತರದೆ ಪೊಲೀಸರಿಗೆ ತೊಂದರೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಿಸೀಟ್ ತಗೊಂಡು ಚೇಂಜ್ ತರ್ತೀನಿ ಅಂಥ ಹೋದವರೂ ಎಸ್ಕೇಪ್ ಆಗಿರೋದು ಇದೆ. ಒಟ್ಟಾರೆ ದಂಡ ಕಲೆಕ್ಟ್ ಮಾಡುವ ಗೊಂದಲದಲ್ಲಿ ಪೊಲೀಸರು ಹಣ ಕಳೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES