ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ಆತಂಕ ಶುರುವಾಗಿದ್ದು, BDA ಸಂಪರ್ಕ ರಸ್ತೆಯಲ್ಲಿ ಚಿರತೆ ಪತ್ತೆಯಾಗಿದೆ. ಇದರಿಂದ ಬೆಂಗಳೂರಿನ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. (ಸಾಂದರ್ಭಿಕ ಚಿತ್ರ)
ಅಲ್ಲಿನ ನಿವಾಸಿಗಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಉತ್ತರಹಳ್ಳಿ ಮುಖ್ಯರಸ್ತೆ ಸುತ್ತಮುತ್ತ ಆತಂಕ ಹೆಚ್ಚಾಗಿದೆ.
4/ 7
ಚಿರತೆಯಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಕೆಂಗೇರಿ, ಕುಂಬಳಗೋಡು, ಉತ್ತರಹಳ್ಳಿಯ ಕೋಡಿಪಾಳ್ಯದಲ್ಲಿ 4 ಚಿರತೆಗಳು ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಅಲರ್ಟ್ ಆಗಿದೆ. (ಸಾಂದರ್ಭಿಕ ಚಿತ್ರ)
5/ 7
ಇನ್ನು ಚಿರತೆ ಪ್ರತ್ಯಕ್ಷವಾಗಿರೋ ಸುತ್ತಮುತ್ತ 5 ಶಾಲೆಗಳಿದ್ದು, ಶಾಲಾ ಮಕ್ಕಳು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಮುಖ್ಯ ರಸ್ತೆಗೆ ಚಿರತೆ ನುಗ್ಗಿ ಬೇಟೆ ಆಡುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. (ಸಾಂದರ್ಭಿಕ ಚಿತ್ರ)
6/ 7
ಸುತ್ತಮುತ್ತ ಇರುವ ಐದಾರು ಶಾಲೆಗಳಿಗೆ ಆತಂಕ ಹೆಚ್ಚಾಗಿದ್ದು, ನಿತ್ಯ ವಾಕಿಂಗ್ಗೂ ಸಾಕಷ್ಟು ಮಂದಿ ರಸ್ತೆಗೆ ಬರ್ತಾರೆ, ಹೀಗಾಗಿ ಬೆಂಗಳೂರು ಹೊರವಲಯದಲ್ಲಿ ಆತಂಕ ಮನೆ ಮಾಡಿದೆ. (ಸಾಂದರ್ಭಿಕ ಚಿತ್ರ)
7/ 7
ಚಿರತೆ ಬಂದಿರುವ ಸುದ್ದಿ ಹರಡುತ್ತಿದ್ದಂತೆ ಎಲ್ಲರಿಗೂ ಭಯ ಶುರುವಾಗಿದ್ದು, ಚಿರತೆ ಹಿಡಿಯುವಂತೆ ಸ್ಥಳೀಯರು ಆಗ್ರಹ ಮಾಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)