BS Yediyurappa: ಪಟ್ಟಿ ಬಿಡುಗಡೆ ಬಗ್ಗೆ ರಾಜಾಹುಲಿ ಶಾಕಿಂಗ್ ಹೇಳಿಕೆ; ಬಿಎಸ್ವೈ ಕಳುಹಿಸಿದ ಪರೋಕ್ಷ ಸಂದೇಶ ಏನು?
ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ಸತತ ಸಭೆ ನಡೆಸುತ್ತಿದೆ. ಭಾನುವಾರ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ ನಡೆಸಲಾಯ್ತು. ಇಂದು ಸಹ ಸಭೆ ನಡೆಯುತ್ತಿದೆ.
ನವದೆಹಲಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಇಂದು 170-180 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದೇವೆ ಎಂದು ಹೇಳಿದರು.
2/ 7
ಸಂಜೆ ವೇಳೆಗೆ ಪಟ್ಟಿ ಬಿಡುಗಡೆಯಾಗಲಿದೆ ಎಂದ ಯಡಿಯೂರಪ್ಪ, ಕೆಲವರನ್ನು ಹೊರತುಪಡಿಸಿ ಬಹುತೇಕ ಎಲ್ಲರಿಗೂ ಟಿಕೆಟ್ ಸಿಗಲಿದೆ ಎಂದು ಹೇಳುವ ಮೂಲಕ ಒಂದಿಷ್ಟು ಹೊಸ ಮುಖಗಳಿಗೆ ಮಣೆ ಹಾಕುವ ಸಂದೇಶ ರವಾನಿಸಿದರು.
3/ 7
ಕೆಲವೊಬ್ಬರನ್ನ ಹೊರತುಪಡಿಸಿ ಎಲ್ಲರಿಗೂ ಟಿಕೆಟ್ ಸಿಗಲಿದೆ. ಈ ಮೂಲಕ ಕೆಲ ಹಾಲಿ ಶಾಸಕರಿಗೆ ಟಿಕೆಟ್ ತಪ್ಪುವ ಬಗ್ಗೆ ಯಡಿಯೂರಪ್ಪ ಸುಳಿವು ನೀಡಿದರು.
4/ 7
ಇಂದು ಗೊಂದಲದ ಕ್ಷೇತ್ರಗಳ ಬಗ್ಗೆ ಸಭೆ ನಡೆಸಲಿದ್ದಾರೆ. ಹಾಲಿ ಶಾಸಕರಲ್ಲಿ 8-10 ಬಿಟ್ರೆ ಎಲ್ಲರಿಗೂ ಟಿಕೆಟ್ ಫೈನಲ್ ಆಗೋ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.
5/ 7
15ರಿಂದ 20 ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ಕುಟುಂಬಕ್ಕೆ ಮಣೆ ಹಾಕದೇ ಹೊಸಬರಿಗೂ ಟಿಕೆಟ್ ಕೊಡಲು ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
6/ 7
ಸವದಿಗೆ ಜಾರಕಿಹೊಳಿ ಟಾಂಗ್
ಅಥಣಿಯಲ್ಲಿ ಬಿಜೆಪಿ ಟಿಕೆಟ್ಗಾಗಿ ಲಕ್ಷ್ಮಣ ಸವದಿ ಹಾಗೂ ಮಹೇಶ್ ಕುಮಟಳ್ಳಿ ನಡುವೆ ಫೈಟ್ ಮುಂದುವರಿದಿದೆ. ಮಹೇಶ್ ಕುಮಟಳ್ಳಿ ಟಿಕೆಟ್ಗಾಗಿ ರಮೇಶ್ ಜಾರಕಿಹೊಳಿ ಕಸರತ್ತು ನಡೆಸುತ್ತಿದ್ದಾರೆ.
7/ 7
ಈ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಅಣ್ಣಾ ಯಾಕಿಷ್ಟು ಚಡಪಡಿಸುತ್ತಿದ್ದೀಯಾ? ಅಂತಾ ಟಾಂಗ್ ನೀಡಿದ್ದಾರೆ. ದಯವಿಟ್ಟು ಅರಾಮಾಗಿರು. ನೂರಕ್ಕೆ ನೂರರಷ್ಟು ಮಹೇಶ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸವಿದೆ. ಕೆಲವು ವಿಷಯ ಬಹಿರಂಗ ಪಡಿಸಲು ಆಗಲ್ಲ ಎಂದಿದ್ದಾರೆ.
First published:
17