Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ

ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ‌ ಹೊಂದಿಕೊಂಡಿರುವ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡ ಕಾರಣ ಹೊಗೆ ವಾತಾವರಣ ನಿರ್ಮಾಣವಾಗಿತ್ತು.

First published:

 • 17

  Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ

  ಸಂಜೆ ಐದು ಗಂಟೆಗೆ ಕಾಣಿಸಿಕೊಂಡಿದ್ದ ಬೆಂಕಿ ರಾತ್ರಿ 10ರವರೆಗೆ ಹೊತ್ತಿ ಉರಿದಿದೆ. ರಾತ್ರಿ 10 ಗಂಟೆ ನಂತರ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

  MORE
  GALLERIES

 • 27

  Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ

  ಬೆಂಕಿ ಕಾಣಿಸಿಕೊಂಡಿದ್ದರಿಂದ ಸುಮಾರು 20 ಎಕರೆ ಪ್ರದೇಶದಲ್ಲಿದ್ದ ಮರಗಳು ಬೆಂಕಿಗೆ ಆಹುತಿಯಾಗಿವೆ. ಈ ಪ್ರದೇಶದಲ್ಲಿ ಕೆಲ ಪ್ರಾಣಿಗಳು ಸಹ ವಾಸವಾಗಿದ್ದವು.

  MORE
  GALLERIES

 • 37

  Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ

  ಸ್ಥಳೀಯರು/ ವಾಹನ ಸವಾರರು ಧೂಮಪಾನ ಮಾಡಿ ಅರಣ್ಯ ಪ್ರದೇಶದಲ್ಲಿ ಸಿಗರೇಟ್ ಎಸೆದಿರುವ ಕಾರಣ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಗಳಿವೆ. ಬೇಸಿಗೆ ಆಗಿರುವ ಕಾರಣ ಎಲೆಗಳು ಒಣಗಿರುತ್ತವೆ. ಸಣ್ಣ ಕಿಡಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆಗಳಿರುತ್ತವೆ.

  MORE
  GALLERIES

 • 47

  Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ

  ಪ್ರತಿ ಬೇಸಿಗೆಯಲ್ಲೂ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುತ್ತದೆ. ಬೆಂಕಿಯ ಕೆನ್ನಾಲಿಗೆ ತೀವ್ರತೆಗೆ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗೆ ತೆರಳಲು ಸಾಧ್ಯವಾಗಿರಲಿಲ್ಲ.

  MORE
  GALLERIES

 • 57

  Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ

  ಕೊನೆಗೆ ಕೌಂಟರ್ ಅಟ್ಯಾಕ್ ತಂತ್ರ‌ ಬಳಸಿ ಬೆಂಕಿ ನಂದಿಸುವ ಕಾರ್ಯ ಮಾಡಲಾಯ್ತು. ಸುಮಾರು ನಾಲ್ಕು ಗಂಟೆಗಳ ಬಳಿಕ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

  MORE
  GALLERIES

 • 67

  Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ

  ಬೆಂಗಳೂರಿನಿಂದ 20 ಕಿಲೋಮೀಟರ್ ಸಮೀಪದಲ್ಲಿದೆ ತುರಹಳ್ಳಿ ಅರಣ್ಯ ಪ್ರದೇಶ. ಕನಕಪುರ ರಸ್ತೆ ಸಮೀಪ, ಮೆಟ್ರೋ ರೈಲಿಗೂ ಹತ್ತಿರದಲ್ಲಿರುವ ಏಕೈಕ ಅರಣ್ಯ ಪ್ರದೇಶವ ಇದಾಗಿದೆ

  MORE
  GALLERIES

 • 77

  Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ

  ಈಗಾಗಲೇ 37 ಎಕರೆ ಟ್ರೀ ಪಾರ್ಕ್ ಮಾಡಿರುವ ಸರ್ಕಾರ ಇದಕ್ಕೆ ಹೆಚ್ಚಿನ ಅಭಿವೃದ್ದಿ ಮಾಡುವುದರ ಬದಲು ಉಳಿದ ಅರಣ್ಯ ಪ್ರದೇಶದಲ್ಲಿ ಮರ ಉದ್ಯಾನ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯರು  ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  MORE
  GALLERIES