ನಿನ್ನೆ ರಾತ್ರಿ ಸುರಿದ ಮಳೆಗೆ ನವರಂಗ್ ಬಳಿ ಪಾದಚಾರಿ ಮಾರ್ಗ ಕುಸಿತ
ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಜನ ಜೀವನ ಅಸ್ತವ್ಯಸ್ತಗೊಳಿಸಿದೆ. ಒಂದೆಡೆ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಸಂಚರಿಸಲಾಗದೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಪಾದಾಚಾರಿಗಳು ದಾರಿ ಕಾಣದೆ ಮನೆ ಸೇರಲು ಹೆಣಗಾಡಿದ ದೃಶ್ಯಗಳು ಸಾಮಾನ್ಯವಾಗಿದ್ದವು. ಆದರೆ ನಿನ್ನೆ ಸುರಿದ ಮಳೆಗೆ ನವರಂಗ್ ಬಳಿ ರಾಜಾಜಿನಗರ ರಾಜ್‌ಕುಮಾರ್ ರಸ್ತೆಯಲ್ಲಿರುವ ಪಾದಾಚಾರಿ ಮಾರ್ಗ 6 ಅಡಿ ಆಳಕ್ಕೆ ಕುಸಿದಿದೆ. ಇವುಗಳ ಕೆಲ ಫೋಟೋಗಳು ಇಲ್ಲಿವೆ.