Karnataka Weather: ಮುಂದಿನ 2 ದಿನ ರಾಜ್ಯದಲ್ಲಿ ಚಳಿ ಹೆಚ್ಚಾಗಲಿದೆ; ಹವಾಮಾನ ಇಲಾಖೆ ಮುನ್ಸೂಚನೆ
ಸದ್ಯ ರಾಜ್ಯದ ಹಲವೆಡೆ ಮುಂಜಾನೆ ದಟ್ಟ ಮಂಜಿನ ವಾತಾವರಣ ಇದೆ. ಮಹಾಶಿವರಾಶ್ರಿ ಹಬ್ಬ ಕಳೆಯುವವರೆಗೂ ಇದೇ ರೀತಿಯ ಮೈ ಕೊರೆಯುವ ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಚಳಿ ಹೆಚ್ಚಾಗಿದೆ. ಬಹುತೇಕ ಕಡೆಗಳಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಹವಾಮಾನದಲ್ಲಿ ಬದಲಾವಣೆ ಕಂಡು ಬಂದಿದೆ. (ಸಾಂದರ್ಭಿಕ ಚಿತ್ರ)
2/ 7
ಬೆಳಗ್ಗೆ ಅತಿಯಾದ ಚಳಿ ಇದ್ದರೆ, ಮಧ್ಯಾಹ್ನದ ಬಳಿಕ ಅತಿಯಾದ ಬಿಸಿಲು ಕಂಡು ಬರುತ್ತಿದೆ. ಈ ವಾತಾವರಣ ಬದಲಾವಣೆಯಿಂದ ಜನತೆ ಕೊಂಚ ತೊಂದರೆ ಎದುರಿಸಬೇಕಾಗಿದೆ.
3/ 7
ಮುಂದಿನ 48 ಗಂಟೆಗಳಲ್ಲಿ ಅಂದರೆ ಮುಂದಿನ 2 ದಿನಗಳ ಕಾಲ ಒಳನಾಡಿನ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಚಳಿ ಮತ್ತಷ್ಟು ಹೆಚ್ಚಾಗುತ್ತದೆ. ಇನ್ನು ಕರಾವಳಿಯಲ್ಲಿ ಕೂಡ ಇದೇ ಪರಿಸ್ಥಿತಿ ಇರಲಿದೆ.
4/ 7
ಹವಾಮಾನ ಇಲಾಖೆ ವರದಿ ಪ್ರಕಾರ, ಬೆಂಗಳೂರಿನ 31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದೆ. ನಗರ ಪ್ರದೇಶದಲ್ಲಿ 32.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
5/ 7
ಇದೇ ರೀತಿಯ ವಾತಾವರಣ ಶಿವರಾತ್ರಿ ಹಬ್ಬ ಅಂದರೆ ಫೆ.18ರವರೆಗೂ ಕಂಡು ಬರಲಿದೆ. ಸಿಬಿಎಸ್ ಸಿ ಪರೀಕ್ಷೆಗಳು ನಡೆಯುತ್ತಿದ್ದು, ಅತಿಯಾದ ಬಿಸಿಲಿನಿಂದ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ.
6/ 7
ಇಂದಿನ ವೆದರ್ ರಿಪೋರ್ಟ್ ನೋಡುವುದಾದರೆ ಬೆಂಗಳೂರಿನದಲ್ಲಿ 29 ಡಿಗ್ರಿ ಸೆಲ್ಸಿಯಸ್ ಇದ್ದು, ನಾಳೆ-ನಾಡಿದ್ದು 31 ಡಿಗ್ರಿ ಸೆಲ್ಸಿಯಸ್ ತಲುಪಲಿದೆ.
7/ 7
ಮೈ ಕೊರೆಯುವ ಚಳಿ ಹೆಚ್ಚಾಗಿದ್ದು, ಮುಂದಿನ 2 ದಿನಗಳ ಕಾಲ ಹೆಚ್ಚಾಗಲಿರುವುದರಿಂದ ಮುಂಜಾನೆ ವಾಕಿಂಗ್ ಮಾಡುವವರು ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಸೂಕ್ತ. ಇನ್ನು ಮುಂಜಾನೆ ದಟ್ಟ ಮಂಜು ಇರುವುದರಿಂದ ವಾಹನ ಸವಾರರು ಕೂಡ ಎಚ್ಚರಿಕೆವಹಿಸಬೇಕು.
First published:
17