Koppal: ಹೊಗೆ ಮಂಜಿನ ಹೊದಿಕೆಯಲ್ಲಿ ಬಂಧಿಯಾದ ಕೊಪ್ಪಳ: ಬಿಸಿಲನಾಡಿನ ಅಪರೂಪದ ದೃಶ್ಯವನ್ನ Photoಗಳಲ್ಲಿ ನೋಡಿ
Koppal Weather: ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಗಳಿಗೆ ಹೋದ್ರೆ ನಿಮ್ಮನ್ನು ಸೂರ್ಯದೇವ ಸ್ವಾಗತಿಸುತ್ತೇನೆ. ಬೇಸಿಗೆಯಲ್ಲಿ ಇಲ್ಲಿಯ ತಾಪಮಾನ ಸಾಮನ್ಯ 35 ರಿಂದ 40 ಡಿಗ್ರಿ ಸೆಲ್ಸಿಯಸ್ ಗಳಷ್ಟು ಇರುತ್ತೆ. ಇದೀಗ ಕೊಪ್ಪಳ ನಗರಕ್ಕೆ ದಟ್ಟ ಹೊಗೆ ಮಂಜು ಹೊದಿಕೆ ಹೊತ್ತುಕೊಂಡು ಮಲೆನಾಡಿನ ಅನುಭವ ನೀಡುತ್ತಿದೆ.
ದಟ್ಟ ಮಂಜು ಹೊಗೆಯ ಹೊದಿಕೆಯಲ್ಲಿ ಬಂಧಿಯಾದ ಕೊಪ್ಪಳ ನಗರದ ಸುಂದರ ದೃಶ್ಯಗಳು ನ್ಯೂಸ್ 18 ಕನ್ನಡ ಕ್ಯಾಮೆರಾದಲ್ಲಿ ಸೆರೆಯಾಗಿವೆ.
2/ 6
ರಾಜ್ಯದಲ್ಲಿ ಕೆಲ ವಾರಗಳಿಂದ ಕೊಪ್ಪಳ, ಗದಗ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಟ್ಟವಾದ ಮಂಜು ಕಾಣಿಸಿಕೊಳ್ಳುತ್ತಿದೆ. ಬೆಳಗ್ಗೆ 10 ಗಂಟೆಯಾದರೂ ಜನರು ಚಳಿಯಿಂದ ನಡಗುವಂತಾಗಿದೆ.
3/ 6
ಇದೀಗ ಕೊಪ್ಪಳದಲ್ಲಿ ಬೆಳಗ್ಗೆ 6.45 ಸಮಯವಾದ್ರೂ ಮಂಜು ಆವರಿಸಿಕೊಂಡಿದ್ದರಿಂದ ಕತ್ತಲು ಆವರಿಸಿತ್ತು, ವಾಹನಗಳ ದೀಪಗಳನ್ನು ಹಾಕಿಹೊಂಡು ರಸ್ತೆಗೆ ಇಳಿದಿದ್ದವು.
4/ 6
ಇನ್ನು ಬೆಳಗ್ಗೆ ವಾಯು ವಿಹಾರಕ್ಕೆ ಆಗಮಿಸಿದ ಜನರು ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಂಡು ಆನಂದಿಸಿದ್ದಾರೆ.
5/ 6
ಈ ರೀತಿಯ ವಾತಾವರಣ ನಮ್ಮಲ್ಲಿ ಕಾಣಸಿಗೋದು ಅಪರೂಪ. ಬೆಳಗ್ಗೆ ಏಳು ಗಂಟೆಯಾದ್ರೂ ಮಂಜು ಕಡಿಮೆ ಆಗುತ್ತಿಲ್ಲ. ದಟ್ಟವಾದ ಮಂಜಿನಲ್ಲಿ ನಮ್ಮ ನಗರ ಮತ್ತಷ್ಟು ಸುಂದರವಾಗಿ ಕಂಗೊಳಿಸತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
6/ 6
ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯಲಾಗುತ್ತದೆ. ಈ ಸಂದರ್ಭದಲ್ಲಿ ಭತ್ತದ ಗದ್ದೆಗಳನ್ನು ನೋಡುವುದೇ ಒಂದು ಸಂಭ್ರಮ.
First published:
16