ಅಡುಗೆ, ಊಟ, ವಾಸ, ನಿದ್ರೆ ಎಲ್ಲಾ ಇಲ್ಲೆ. ಸ್ನಾನಕ್ಕೆ ಬಾತ್ ರೂಂ ಇಲ್ಲ. ಶೌಚಾಲಯವನ್ನು ಕೇಳೋದೇ ಬೇಡ. ತಾತ್ಕಾಲಿಕವಾಗಿರಿ ಎಂದ ಅಧಿಕಾರಿಗಳು ಒಂದೂವರೆ ವರ್ಷದಿಂದ ಇವರಿಗೆ ಮನೆ ಕಟ್ಟಿಸಿಕೊಡುವುದರಲ್ಲೇ ಇದ್ದಾರೆ. ಬಂದವರು ತಿಂಗಳುಗಳ ಹೆಸರು ಹೇಳಿ ಹೋಗುತ್ತಿದ್ದಾರೆ ವಿನಃ ಬದಲಿ ವ್ಯವಸ್ಥೆ ಮಾಡಿಲ್ಲ. ಇವರ ಬದುಕಿನ ಶೈಲಿ ನೋಡಿದರೆ ಸರ್ಕಾರ ಇದೆಯಾ ಅದು ಬೇಕಾ ಅನಿಸುತ್ತದೆ.
ಚುನಾವಣೆ ಸಂದರ್ಭದಲ್ಲಿ ಇದೇ ಶಾಲೆ ಕೊಠಡಿ ಬೂತ್ ಆಗಿತ್ತು. ಆಗ ಬಂದಿದ್ದ ತಹಶೀಲ್ದಾರ್ ಇನ್ನೂ ಸಿಕ್ಕಿಲ್ವಾ? ಇವರಿಗೆ ಬೇಗ ಮನೆ ಕೊಡಿ ಎಂದು ಅಧಿಕಾರಿಗಳಿಗೆ ಹೇಳಿದ್ದರು. ಆದರೆ ಎಲೆಕ್ಷನ್ ಮುಗಿದ ಮೇಲೆ ಎಲ್ಲರೂ ಮರೆತರು. ಶಾಸಕರಂತೂ ಬಂದೇ ಇಲ್ಲ. ಇನ್ನು ಅಧಿಕಾರಿಗಳು ಬಂದರೂ ಉಪಯೋಗವಿಲ್ಲ. ಒಂದು ಎಕರೆ ಅಡಿಕೆ ತೋಟ ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಇರೋ ಮಗನನ್ನ ಹಾಸ್ಟೆಲ್ನಲ್ಲಿ ಬಿಟ್ಟು ಕೂಲಿ ಮಾಡುತ್ತಾ ಸರ್ಕಾರದ ನೆರವಿನ ಹಾದಿ ಕಾಯುತ್ತಿದ್ದಾರೆ.