ಮೈಸೂರಿನಲ್ಲಿ ವರುಣನ ಅಬ್ಬರಕ್ಕೆ ಮತ್ತೊಂದು ಬಲಿಯಾಗಿದೆ ಮೈಸೂರಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮುಬೀನಾ ತಾಜ್ ಎಂಬವರು ಸಾವನ್ನಪ್ಪಿದ್ದಾರೆ ಚಿಕ್ಕಮಗಳೂರಿನ ಮಾಗುಂಡಿ ಗ್ರಾಮದಲ್ಲಿ 15 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ ಚಿಕ್ಕಮಗಳೂರಿನಲ್ಲಿ ರೌದ್ರಾವತಾರ ತಾಳಿರುವ ಭದ್ರಾ ನದಿಯ ಹೊಡೆತಕ್ಕೆ ಜನ ತತ್ತರ ಚಿಕ್ಕಮಗಳೂರಿನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮನೆ ಬಿಟ್ಟು ಹೊರಗಡೆ ಬಂದಿದ್ದಾರೆ ಚಿಕ್ಕಮಗಳೂರಿನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮನೆ ಬಿಟ್ಟು ಹೊರಗಡೆ ಬಂದಿದ್ದಾರೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಪ್ರವಾಹ ಉಂಟಾಗಿದ್ದು, ಚರ್ಚ್, ಮಸೀದಿ, ದೇವಾಲಯಗಳು ಮುಳುಗಡೆಯಾಗಿವೆ. ತುಂಗಾ ಪ್ರವಾಹಕ್ಕೆ ನರಸಿಂಹ ವನ ಜಲಾವೃತವಾಗಿದೆ. ವಿದ್ಯುತ್, ನೀರು ಇಲ್ಲದೆ ಪರದಾಟ ನಡೆಸುತ್ತಿದ್ಧಾರೆ. ಮಲೆನಾಡಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಭದ್ರೆ ಮನಬಂದಂತೆ ನುಗ್ಗುತ್ತಿದ್ದಾಳೆ. ಕರಾವಳಿ ಭಾಗದಲ್ಲಿನ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ಸೇತುವೆಗಳು ನೆಲಸಮವಾಗಿದೆ. (ಫೋಟೋ ಕೃಪೆ: ಪೌಲೋಸ್.ಬಿ) ನಿರಂತರ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದ್ದು, ಕರಾವಳಿಯ ಬಂಟ್ವಾಳ ಭಾಗದಲ್ಲಿ ನೆರೆ ನೀರು ಮನೆಗಳಿಗೆ ನುಗ್ಗಿದೆ. (ಫೋಟೋ ಕೃಪೆ: ಪೌಲೋಸ್.ಬಿ) ಕರಾವಳಿ ಭಾಗದ ನೇತ್ರಾವತಿ ನದಿಯ ಹರಿವು ಹೆಚ್ಚಾಗಿದೆ. ಬಂಟ್ವಾಳ ಕೆಲ ಪ್ರದೇಶಗಳಿಗೆ ನೀರು ನುಗ್ಗಿದ್ದು ಎನ್ಡಿಆರ್ಎಫ್ ತಂಡ ರಕ್ಷಣೆಗೆ ಮುಂದಾಗಿದೆ. (ಫೋಟೋ ಕೃಪೆ: ಪೌಲೋಸ್.ಬಿ)