ಮಲೆನಾಡು ಚಿಕ್ಕಮಗಳೂರಿನಲ್ಲಿ ಮಹಾಮಳೆ ಮುಂದುವರೆದಿದ್ದು, ಭದ್ರಾ ನದಿ ಪ್ರವಾಹದ ಮಟ್ಟ ಮೀರಿ ಹರಿಯಿತ್ತಿದೆ. ಭದ್ರಾ ನದಿ ಆರ್ಭಟಕ್ಕೆ ಖಾಂಡ್ಯ- ಬಾಳಗದ್ದೆ ತೂಗು ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ.
2/ 14
ತೂಗು ಸೇತುವೆ ಕೊಚ್ಚಿ ಹೋದ ಪರಿಣಾಮ ಬಾಳಗದ್ದೆ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಭದ್ರಾ ನದಿ ದಾಟಲು ಈ ಗ್ರಾಮಕ್ಕೆ ಈ ತೂಗು ಸೇತುವೆಯೇ ಆಸರೆಯಾಗಿತ್ತು. ಈಗ ಐವತ್ತಕ್ಕೂ ಹೆಚ್ಚು ಕುಟುಂಬಗಳ ಸಂಪರ್ಕ ಬಂದ್ ಆಗಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಬಳಿ ಈ ತೂಗು ಸೇತುವೆ ಇದೆ.
3/ 14
ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಪ್ರವಾಹ ಉಂಟಾಗಿದ್ದು, ಚರ್ಚ್, ಮಸೀದಿ, ದೇವಾಲಯಗಳು ಮುಳುಗಡೆಯಾಗಿವೆ.
4/ 14
ಭದ್ರೆಯ ಅಬ್ಬರಕ್ಕೆ ದೇವತೆಗಳೇ ನೀರುಪಾಲಾಗಿವೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಇತಿಹಾಸ ಪ್ರಸಿದ್ಧ ಖಾಂಡ್ಯ ಮಾರ್ಕಂಡೇಶ್ವರ ದೇವಾಲಯ ಮುಳುಗಡೆಯಾಗಿದೆ.
5/ 14
ಭದ್ರೆಯ ಒಡಲು ಹೆಚ್ಚುತ್ತಲೇ ಇದ್ದು, ಗೋರಿಗಂಡಿಯಲ್ಲಿ ಚರ್ಚ್, ಮಸೀದಿ ಮುಳುಗಡೆಯಾಗಿದೆ.
6/ 14
ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ನೀರಿನಿಂದಲೇ ಮುಳುಗಡೆಯಾಗಿದೆ. ಅಸಹಾಯಕ ಸ್ಥಿತಿಯಲ್ಲಿ ಸರ್ಕಾರ ಹಾಗೂ ಜನರು ಇದ್ದಾರೆ.
7/ 14
ತುಂಗಾ ನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ.
8/ 14
ತುಂಗಾ ಪ್ರವಾಹಕ್ಕೆ ನರಸಿಂಹ ವನ ಜಲಾವೃತವಾಗಿದೆ. ವಿದ್ಯುತ್, ನೀರು ಇಲ್ಲದೆ ಪರದಾಟ ನಡೆಸುತ್ತಿದ್ಧಾರೆ.
9/ 14
ಮಠದ ಗಾಂಧಿ ಮೈದಾನ ಆವರಣ ಜಲಾವೃತವಾಗಿದೆ.
10/ 14
ಶಾರದಾಂಬೆಗೂ ತಟ್ಟಿದ ಪ್ರವಾಹದ ಭೀತಿ
11/ 14
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಾಲಯ
12/ 14
ಮಲೆನಾಡಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಭದ್ರೆ ಮನಬಂದಂತೆ ನುಗ್ಗುತ್ತಿದ್ದಾಳೆ.
13/ 14
ಕಣ್ಣಿಗೆ ಕಂಡ ಜಾಗವೆಲ್ಲಾ ಭದ್ರೆಯ ಒಡಲಾಗಿದೆ. ಭದ್ರೆಯ ಅಬ್ಬರಕ್ಕೆ ಬಾಳೆಹೊನ್ನೂರು ಬಲಿಯಾಗಿದೆ.
14/ 14
ಕಳಸ, ಬಾಳೆಹೊನ್ನೂರು, ಬಾಳೂರು ಭಾಗದಲ್ಲಿ ಭೂ ಕುಸಿತವಾಗುತ್ತಿದ್ದು, ಮನೆಗಳು ಕುಸಿದು ಬೀಳುತ್ತಿವೆ.