ಮರಾಠಿ ಶಾಸಕನ ಕನ್ನಡ ಪ್ರೇಮ:
ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂಗೆ, ಬರಗಾಲದಲ್ಲಿ ನೀರು ಉಕ್ಕಿದಂಗೆ ಒಬ್ಬರು ಶಾಸಕರು ಎಲ್ಲರ ಗಮನ ಸೆಳೆದರು. ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲಗೆಕರ್ ಮೂಲತಃ ಮರಾಠಿ ಭಾಷಿಕರು. ಆದರೂ ತಡವರಿಸುತ್ತ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದಾಗ ಶಾಸಕರು ಮೇಜು ಕುಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.