Shivamogga: ಮದುವೆಯಾಗು, ಇಲ್ಲ ಸತ್ತು ಹೋಗು; ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

ಮದುವೆ ಆಗುವಂತೆ ಕಿರುಕುಳ ನೀಡಿದ್ದಕ್ಕೆ 20 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.

First published:

  • 17

    Shivamogga: ಮದುವೆಯಾಗು, ಇಲ್ಲ ಸತ್ತು ಹೋಗು; ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

    20 ವರ್ಷದ ಸುಮಾ ಆತ್ಮಹತ್ಯೆಗೆ ಶರಣಾದ ಯುವತಿ. 2019ರಲ್ಲಿ ಸುಮಾ ಮದುವೆ ನ್ಯಾಮತಿ‌ ಮೂಲದ ಪ್ರವೀಣ್ ಎಂಬಾತನ ಜೊತೆ ನಿಶ್ಚಯವಾಗಿತ್ತು. ನಿಶ್ಚಿತಾರ್ಥ ಸಹ ನಡೆದಿತ್ತು.

    MORE
    GALLERIES

  • 27

    Shivamogga: ಮದುವೆಯಾಗು, ಇಲ್ಲ ಸತ್ತು ಹೋಗು; ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

    ಯುವಕನ ಕಡೆಯವರು ಬೇಗ ಮದುವೆ ಮಾಡಿಕೊಡುವಂತೆ ಸುಮಾ ಕುಟುಂಬಸ್ಥರ ಮೇಲೆ ಒತ್ತಡ ಹಾಕಿದ್ದರು. ಆದ್ರೆ ಮಗಳ ಓದಿನ ಹಿನ್ನೆಲೆ ಕುಟುಂಬಸ್ಥರು ಮದುವೆ ಮುಂದೂಡುತ್ತಾ ಬಂದಿದ್ದಾರೆ.

    MORE
    GALLERIES

  • 37

    Shivamogga: ಮದುವೆಯಾಗು, ಇಲ್ಲ ಸತ್ತು ಹೋಗು; ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

    ಸದ್ಯ ಸುಮಾ ನಗರದ ಖಾಸಗಿ ಕಾಲೇಜಿನಲ್ಲಿ ಎಂಸಿಎ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದರು. ಪ್ರವೀಣ್ ಸೇರಿದಂತೆ ಆತನ ಕುಟುಂಬಸ್ಥರು ಸುಮಾ ಮೇಲೆಯೂ ಬೇಗ ಮದುವೆ ಆಗುವಂತೆ ಒತ್ತಡ ಹಾಕುತ್ತಿದ್ದರು.

    MORE
    GALLERIES

  • 47

    Shivamogga: ಮದುವೆಯಾಗು, ಇಲ್ಲ ಸತ್ತು ಹೋಗು; ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

    ಈ ನಡುವೆ ಪ್ರವೀಣ್ ತನ್ನನ್ನು ಮದುವೆ ಆಗುವಂತೆ ಫೋನ್‌ನಲ್ಲಿ ಒತ್ತಾಯ ಮಾಡುತ್ತಿದ್ದ ಎನ್ನಲಾಗುತ್ತಿದೆ. ಪ್ರವೀಣ್ ಮತ್ತು ಆತನ ಕುಟುಂಬಸ್ಥರು ಮದುವೆಯಾಗು ಅಥವಾ ಇಲ್ಲವಾದ್ರೆ ಸತ್ತು ಹೋಗು ಎಂದು ಹೇಳಿದ್ದರಂತೆ.

    MORE
    GALLERIES

  • 57

    Shivamogga: ಮದುವೆಯಾಗು, ಇಲ್ಲ ಸತ್ತು ಹೋಗು; ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

    ಇವರ ಮಾತುಗಳಿಂದ ನೊಂದ ಸುಮಾ ಬೊಮ್ಮನಕಟ್ಟೆ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಪೋಷಕರು ಸುಮಾಳನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು.

    MORE
    GALLERIES

  • 67

    Shivamogga: ಮದುವೆಯಾಗು, ಇಲ್ಲ ಸತ್ತು ಹೋಗು; ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

    ನಂತರ ಹೆಚ್ಚಿನ ಚಿಕಿತ್ಸೆಗಾಗಿ ಫೆಬ್ರವರಿ 10ರಂದು ಸುಮಾಳನ್ನು ಮೆಗ್ಗಾನ್ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸುಮಾ ಮೃತಳಾಗಿದ್ದಾಳೆ.

    MORE
    GALLERIES

  • 77

    Shivamogga: ಮದುವೆಯಾಗು, ಇಲ್ಲ ಸತ್ತು ಹೋಗು; ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

    ಈ ಸಂಬಂಧ ಸುಮಾ ತಾಯಿ ನೀಡಿದ ದೂರಿನ ಅನ್ವಯ ಪ್ರವೀಣ್ ಸೇರಿದಂತೆ ಐವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

    MORE
    GALLERIES