2019ರಲ್ಲೂ ಮಂಡ್ಯ ಲೋಕಸಭಾ ಚುನಾವಣೆಯ ರೋಡ್ ಶೋ ವೇಳೆ ಅಭಿಮಾನಿಯೊಬ್ಬ ಕುಮಾರಸ್ವಾಮಿ ಅವರಿಗೆ ಮುತ್ತು ಕೊಟ್ಟಿದ್ದ. ಈ ವೇಳೆ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಹಿಡಿದುಕೊಂಡು ದೂರ ಕಳುಹಿಸಿದ್ದರು. ಆದರೆ ಕೆಲ ಕಾರ್ಯಕರ್ತರು ಆ ವೇಳೆ ಅಭಿಮಾನಿ ಮೇಲೆ ಹಲ್ಲೆ ಮಾಡಿದ್ದರು. ಇತ್ತ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ಮುತ್ತು ಕೊಟ್ಟಿದ್ದ ಪ್ರಸಂಗವೂ ನಡೆದಿತ್ತು. ಇಂದಿಗೂ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.