ಆರು ವರ್ಷದ ಜಶ್ವಿತ್ ಮತ್ತು ಗಂಗಾಧರ್ ಮೃತರು. ಆತ್ಮಹತ್ಯೆಗೂ ಮುನ್ನ ಗಂಗಾಧರ್ ಮಾಡಿದ್ದ ವಿಡಿಯೋ ಲಭ್ಯವಾಗಿದೆ. ವಿಡಿಯೋದಲ್ಲಿ ತಮ್ಮ ನಿರ್ಧಾರಕ್ಕೆ ಪತ್ನಿ ಸಿಂಧು ಮತ್ತು ಆಕೆಯ ಇನಿಯ LIC ಏಜೆಂಟ್ ನಂಜುಂಡೆಗೌಡ ಕಾರಣ ಎಂದು ಹೇಳಿದ್ದಾರೆ. ಮಂಡ್ಯದ ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಗ್ರಾಮದ ಹೊರವಲಯದ ತೊರೆಗೆ ಮಗನೊಂದಿಗೆ ಹಾರಿ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದರು.