3 ವರ್ಷಗಳ ಕಾಲಾವಧಿಯಲ್ಲಿ ಹಂತಹಂತವಾಗಿ ರೈತರಿಗೆ ಈ ಬೆಂಬಲದ ಹಣ ನೀಡಲಾಗುತ್ತದೆ. ಸಣ್ಣ ರೈತರಿಗೆ ಹೆಚ್ಚಿನ ತಂತ್ರಜ್ಞಾನದ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ರೈತರು ಈ ರೀತಿ ಗುಂಪಾಗಿ ಕೆಲಸ ಮಾಡಿದರೆ ಉತ್ತಮ ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಕೊಳ್ಳಲು ಯೋಜನೆ ಸಹಾಯ ಮಾಡುತ್ತದೆ. ಇದರಿಂದ ಎಲ್ಲಾ ರೈತರೂ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯುವತ್ತ, ಹೆಚ್ಚು ಲಾಭ ಗಳಿಸುವತ್ತ ಗಮನ ಹರಿಸಬಹುದಾಗಿದೆ.