ದೂರ ದೂರದಿಂದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಬರುವ ರೈತರು ಕೆಲವೊಮ್ಮೆ ನಿರಾಸೆಯಿಂದ ಹೋಗುವಂತಾಗುತ್ತದೆ.
2/ 7
ಶಿವಮೊಗ್ಗ ಜಿಲ್ಲೆಯ ರೈತರೊಬ್ಬರು ಚಿಕಿತ್ಸೆ ಸಿಗದೇ ಸಾವನ್ನಪ್ಪಿದ ಕುರಿಯನ್ನು ಪಶು ಆಸ್ಪತ್ರೆ ಮುಂದೆ ನೇತು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
3/ 7
ಶಿವಮೊಗ್ಗ ಜಿಲ್ಲೆಯ ಹೊಸನಗರದ ಪಶು ಆಸ್ಪತ್ರೆ ಮುಂದೆ ಕುರಿ ಮಾಲೀಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಈ ವಿಡಿಯೋ ಸ್ಥಳೀಯಮಟ್ಟದಲ್ಲಿ ವೈರಲ್ ಆಗಿದೆ.
4/ 7
ಹೊಸನಗರ ತಾಲೂಕಿನ ಮುತ್ತೂರಿನ ನಿವಾಸಿ ಕೊಲ್ಲನಾಯ್ಕ್ ವಿನೂತನವಾಗಿ ಪ್ರತಿಭಟನೆ ನಡೆಸಿದ ರೈತ. ಕೊಲ್ಲನಾಯ್ಕ್ ಸಾಕಿದ್ದ ಮೂರು ಕುರಿಗಳು ಅನಾರೋಗ್ಯ ಪೀಡಿವಾಗಿದ್ದವು. ಚಿಕಿತ್ಸೆಗಾಗಿ ಫೋನ್ ಮೂಲಕ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು.
5/ 7
ಹೊಟ್ಟೆ ಉಬ್ಬರಿಸಿ ಒಂದು ಕುರಿ ಸಾವು ಕಂಡ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತಂದಿದ್ದರು. ಆದರೆ ಅಷ್ಟರೊಳಗೆ ಪಶುವೈದ್ಯ ಸಿಬ್ಬಂದಿಆಸ್ಪತ್ರೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ಮರಣೋತ್ತರ ಪರೀಕ್ಷೆ ನಡೆಸಲು ಸಿಬ್ಬಂದಿ ಹಿಂದೇಟು ಹಾಕಿದ್ದರಿಂದ ರೈತ ಸತ್ತ ಕುರಿಯನ್ನು ಆಸ್ಪತ್ರೆ ಕಟ್ಟಡದ ತೊಲೆಗೆ ಕಟ್ಟಿ ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಆಸ್ಪತ್ರೆಯಲ್ಲಿ ಜಾನುವಾರಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ವ್ಯವಸ್ಥೆ ಸರಿಪಡಿಸುವಂತೆ ರೈತ ಕೊಲ್ಲನಾಯ್ಕ್ ಆಗ್ರಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)