ಬಿಎಸ್‌ವೈ ಪುತ್ರ, ಬಿವೈ ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಮಾಜಿ ಸಿಎಂ ಬಿಸ್ ಯಡಿಯೂರಪ್ಪ ಅವರು ನಟಿ ಶೃತಿ ಅವರ ಕೆನ್ನೆ ಹಿಂಡಿದ್ದಾರೆ.
2/ 8
ಮೆರವಣಿಗೆ ಸಹಸ್ರಾರು ಜನರು ಭಾಗಿಯಾಗಿದ್ದರು. ಈ ವೇಳೆ ನಟಿ ಶ್ರುತಿ ಅವರು ಜನರತ್ತ ಕೈ ಬೀಸಿ ನಗು ಬೀರಿದ್ದಾರೆ. ಆಗ ಪಕ್ಕದಲ್ಲೇ ಇದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಶೃತಿ ಅವರ ಕೆನ್ನೆ ಹಿಂಡಿ ಮುಗುಳ್ನಕ್ಕರು.
3/ 8
ಬಿಎಸ್ ಯಡಿಯೂರಪ್ಪ ಅವರು ತಮ್ಮನ್ನು ಗಮನಿಸುತ್ತಿದ್ದಂತೆ ಕೈ ಮುಗಿದು ನಮಸ್ಕರಿಸಿದ ನಟಿ ಶೃತಿ ಅವರು ಬಿಎಸ್‌ವೈ ಅವರ ಆಶೀರ್ವಾದ ಪಡೆಯಲು ತಲೆ ಬಾಗಿಸಿದರು.
4/ 8
ಆಗ ಶೃತಿ ಅವರ ತಲೆಗೆ ಕೈ ಹಾಕಿ ಆಪ್ತತೆಯಿಂದ ಕಿವಿಯಲ್ಲಿ ಬಿಎಸ್‌ವೈ ಏನೋ ಹೇಳಿದರು. ಆಗ ಶೃತಿ ಅವರು ಕೂಡ ಯಡಿಯೂರಪ್ಪ ಅವರ ಮಾತಿಗೆ ಮುಗುಳ್ನಕ್ಕರು.
5/ 8
ಇನ್ನು ಬಿಎಸ್‌ವೈ ಮತ್ತು ಶೃತಿ ಅವರ ಮಧ್ಯೆ ನಿಂತುಕೊಂಡಿದ್ದ ಕುಡಚಿ ಶಾಸಕ ಪಿ ರಾಜೀವ್ ಅವರು, ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ತಮ್ಮಷ್ಟಕ್ಕೆ ತಾವೇ ನಿಂತಿದ್ದರು.
6/ 8
ಇಂದು ಶಿವಮೊಗ್ಗದಲ್ಲಿ ಬಿಎಸ್‌ವೈ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆ ಮಾಡಲಾಯಿತು.
7/ 8
ಇದಕ್ಕೂ ಮುನ್ನ ಬೃಹತ್ ಜಾಥಾದಲ್ಲಿ ಬಿಎಸ್‌ವೈ, ನಟಿ ಶೃತಿ, ಶಾಸಕ ಪಿ ರಾಜೀವ್ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಭಾಗಿಯಾಗಿದ್ದರು.
8/ 8
ಶಿವಮೊಗ್ಗದ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಈ ವರೆಗೆ ಮಾಜಿ ಸಿಎಂ ಬಿಎಸ್‌ವೈ ಅವರು ಪ್ರತಿನಿಧಿಸುತ್ತಿದ್ದರು. ಇದೇ ಮೊದಲ ಬಾರಿಗೆ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರು ಶಿಕಾರಿಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.