PM Modi: ದಾರದಲ್ಲಿ ಅರಳಿದ ಮೋದಿ; ಹೇಗಿದೆ ಗೊತ್ತಾ ಗಿಫ್ಟ್ ಹೇಗಿದೆ? ಅಭಿಮಾನಿ ಹೇಳಿದ್ದೇನು?

ಪ್ರಧಾನಿ ಮೋದಿ ಅವರಿಂದ ನಮ್ಮ ಟೈಲರ್ಸ್​​ಗೆ ಬಹಳ ಅನುಕೂಲ ಆಗಿದೆ. ಮೋದಿ ಕೋಟ್​ ಅಂತ ದೇಶದಾದ್ಯಂತ ಅವರ ಕೋಟ್​ ಬಹಳ ಪ್ರಸಿದ್ಧಿ ಪಡೆದಿದೆ. ನಮ್ಮ ಟೈಲರ್ಸ್​ಗೆ ಬರುವ ಹಲವು ಗ್ರಾಹಕರು ಮೋದಿ ಕೋಟ್​ ಹೊಲಿದು ಕೊಡುವಂತೆ ಕೇಳ್ತಾರೆ. ಇದರಿಂದ ನಮ್ಮ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗಿದೆ ಎಂದು ಅಭಿಮಾನಿ ಹೇಳಿದ್ದಾರೆ.

First published:

  • 17

    PM Modi: ದಾರದಲ್ಲಿ ಅರಳಿದ ಮೋದಿ; ಹೇಗಿದೆ ಗೊತ್ತಾ ಗಿಫ್ಟ್ ಹೇಗಿದೆ? ಅಭಿಮಾನಿ ಹೇಳಿದ್ದೇನು?

    ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದಲ್ಲಿ ಬೃಹತ್ ರೋಡ್‌ಶೋ ನಡೆಸಲಿದ್ದಾರೆ. ಸುಮಾರು 8 ಕಿಲೋ ಮೀಟರ್​ ರೋಡ್‌ ಶೋ ಮುಗಿಸಿ, ಶಿವಮೊಗ್ಗಕ್ಕೆ ತೆರಳಿ ಏರ್‌ಪೋರ್ಟ್ ಉದ್ಘಾಟನೆ ಮಾಡಲಿದ್ದಾರೆ.

    MORE
    GALLERIES

  • 27

    PM Modi: ದಾರದಲ್ಲಿ ಅರಳಿದ ಮೋದಿ; ಹೇಗಿದೆ ಗೊತ್ತಾ ಗಿಫ್ಟ್ ಹೇಗಿದೆ? ಅಭಿಮಾನಿ ಹೇಳಿದ್ದೇನು?

    ಬೆಳಗಾವಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರಿಗೆ ಅವರ ಅಭಿಮಾನಿಗಳು ಸೂಕ್ಷ್ಮ ಕಲಾಕೃತಿಯೊಂದನ್ನು ಗಿಫ್ಟ್​ ನೀಡಲು ಸಿದ್ಧರಾಗಿದ್ದಾರೆ. ಹೌದು, ದಾರದಲ್ಲೇ ಅರಳಿರುವ ಮೋದಿ ಭಾವಚಿತ್ರವನ್ನು ನೀಡಲು ಬೆಳಗಾವಿಯ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    MORE
    GALLERIES

  • 37

    PM Modi: ದಾರದಲ್ಲಿ ಅರಳಿದ ಮೋದಿ; ಹೇಗಿದೆ ಗೊತ್ತಾ ಗಿಫ್ಟ್ ಹೇಗಿದೆ? ಅಭಿಮಾನಿ ಹೇಳಿದ್ದೇನು?

    ಬೆಳಗಾವಿಯ ಎಸ್​​ಕೆ ಕಕಡೆ ಟೈಲರ್ಸ್​​ ಎಂಬ ಬಟ್ಟೆ ಹೊಲಿಗೆ ಮಾಡುವ ಶಾಪ್​​ನ ಟ್ರೈಲರ್​ ತಂಡವೊಂದು ವಿಶೇಷ ಗಿಫ್ಟ್ಅನ್ನು ಪ್ರಧಾನಿ ಮೋದಿ ಅವರಿಗಾಗಿ ನೀಡಲು ಮುಂದಾಗಿದೆ. ದಾರದಿಂದಲೇ ಭಾವಚಿತ್ರ ತಯಾರಿಸಲಾಗಿದ್ದು, ಸುಮಾರು 12 ಲಕ್ಷ ಸ್ಟಿಚ್​​ನಿಂದ ಮೋದಿ ಭಾವಚಿತ್ರವನ್ನು ಬಿಡಿಸಿದ್ದಾರೆ.

    MORE
    GALLERIES

  • 47

    PM Modi: ದಾರದಲ್ಲಿ ಅರಳಿದ ಮೋದಿ; ಹೇಗಿದೆ ಗೊತ್ತಾ ಗಿಫ್ಟ್ ಹೇಗಿದೆ? ಅಭಿಮಾನಿ ಹೇಳಿದ್ದೇನು?

    ನಾಳೆ ಬೆಳಗಾವಿಗೆ ಮೋದಿ ಅವರು ಆಗಮಿಸುವ ಹಿನ್ನೆಲೆಯಲ್ಲಿ ತಮ್ಮ ಕಲಾಕೃತಿಯನ್ನು ಪ್ರಧಾನಿಗಳಿಗೆ ನೀಡಲು ಅಭಿಮಾನಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರನ್ನು ಸಂಪರ್ಕ ಮಾಡಿ ಮನವಿ ಮಾಡಿದ್ದಾರೆ. ಅಭಿಮಾನಿಯ ಕಲಾಕೃತಿಯ ನೋಡಿದ ರಮೇಶ್​ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಮೋದಿ ಅವರಿಗೆ ತಲುಪುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರಂತೆ.

    MORE
    GALLERIES

  • 57

    PM Modi: ದಾರದಲ್ಲಿ ಅರಳಿದ ಮೋದಿ; ಹೇಗಿದೆ ಗೊತ್ತಾ ಗಿಫ್ಟ್ ಹೇಗಿದೆ? ಅಭಿಮಾನಿ ಹೇಳಿದ್ದೇನು?

    ಇನ್ನು, ಈ ಕುರಿತು ಮಾತನಾಡಿರುವ ಎಸ್​​ಕೆ ಕಕಡೆ ಟೈಲರ್ಸ್​​ನ ಸಚಿನ್​ ಶ್ರೀಕಾಂತ್ ಕಕಡೆ ಅವರು, 10 ಮಂದಿಯ ತಂಡ ಸತತ ಒಂದು ತಿಂಗಳು ಕೆಲಸ ಮಾಡಿ ಈ ಕಲಾಕೃತಿ ನಿರ್ಮಿಸಿದ್ದೇವೆ. ನಮ್ಮ ಟೈಲರ್​​ಗಳಿಂದ ಮೋದಿ ಅವರಿಗೆ ಸನ್ಮಾನ ಮಾಡು ಉದ್ದೇಶದಿಂದ ತಯಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

    MORE
    GALLERIES

  • 67

    PM Modi: ದಾರದಲ್ಲಿ ಅರಳಿದ ಮೋದಿ; ಹೇಗಿದೆ ಗೊತ್ತಾ ಗಿಫ್ಟ್ ಹೇಗಿದೆ? ಅಭಿಮಾನಿ ಹೇಳಿದ್ದೇನು?

    ಅಲ್ಲದೆ, ಪ್ರಧಾನಿ ಮೋದಿ ಅವರಿಂದ ನಮ್ಮ ಟೈಲರ್ಸ್​​ಗೆ ಬಹಳ ಅನುಕೂಲ ಆಗಿದೆ. ಮೋದಿ ಕೋಟ್​ ಅಂತ ದೇಶದಾದ್ಯಂತ ಅವರ ಕೋಟ್​ ಬಹಳ ಪ್ರಸಿದ್ಧಿ ಪಡೆದಿದೆ. ನಮ್ಮ ಟೈಲರ್ಸ್​ಗೆ ಬರುವ ಹಲವು ಗ್ರಾಹಕರು ಮೋದಿ ಕೋಟ್​ ಹೊಲಿದು ಕೊಡುವಂತೆ ಕೇಳ್ತಾರೆ. ಇದರಿಂದ ನಮ್ಮ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗಿದೆ. ಆದ್ದರಿಂದ ಅವರಿಗೆ ನಮ್ಮಿಂದ ಏನಾದರೂ ಗಿಫ್ಟ್​ ನೀಡಬೇಕು ಎಂದು ಯೋಚನೆ ಬಂದಾಗ, ಈ ಕಲಾಕೃತಿ ತಯಾರಿಸುವ ಯೋಚನೆ ಬಂತು ಸಚಿನ್ ಕಕಡೆ ತಿಳಿಸಿದ್ದಾರೆ.

    MORE
    GALLERIES

  • 77

    PM Modi: ದಾರದಲ್ಲಿ ಅರಳಿದ ಮೋದಿ; ಹೇಗಿದೆ ಗೊತ್ತಾ ಗಿಫ್ಟ್ ಹೇಗಿದೆ? ಅಭಿಮಾನಿ ಹೇಳಿದ್ದೇನು?

    ಬೆಳಗಾವಿ ನಗರದಲ್ಲಿ ಎಸ್​​ಕೆ ಟೈಲರ್ಸ್​ ಶಾಪ್​ ಇದೆ. ನಮ್ಮ ಕಲಾಕೃತಿ ನೋಡಿದ ಬೆಳಗಾವಿ ನಾಯಕರು ನಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದು, ಇದನ್ನು ಪ್ರಧಾನಿಗಳಿಗೆ ತಲುಪಿಸುವ ಕಾರ್ಯ ಮಾಡ್ತೀವಿ ಅಂತ ತಿಳಿಸಿದ್ದಾರೆ. ಇದರಿಂದ ನಮಗೆ ಬಹಳ ಖುಷಿ ಆಗಿದೆ. ನಾಳೆ ಮೋದಿ ಆಗಮನಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    MORE
    GALLERIES