Tumakuru: ಎಲ್ಲವೂ ಸರಿ ಹೋಯ್ತು ಅನ್ನೋಷ್ಟರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಗೃಹಿಣಿ
ಸಂಸಾರದ ಬಂಡಿ ಮತ್ತೆ ಲಯಕ್ಕೆ ಮರಳುತ್ತಿದೆ ಎಂದು ಆಕೆಯ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಅಷ್ಟರಲ್ಲಿಯೇ ಗೃಹಿಣಿ ದುಡುಕಿನ ನಿರ್ಧಾರ ತೆಗೆದುಕೊಂಡು ಬಾರದ ಲೋಕಕ್ಕೆ ಮರಳಿದ್ದಾಳೆ.
ಹೌದು, ಗೃಹಿಣಿ ಚೈತ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
2/ 9
ಗುಬ್ಬಿ ತಾಲೂಕಿನ ಸಂಪಿಗೆ ಮೂಲದ ಚೈತ್ರಾ ಅವರನ್ನು 9 ವರ್ಷಗಳ ಹಿಂದೆ ಚಿಕ್ಕನಾಯಕನಹಳ್ಳಿ ಮೂಲದ ದೀಲಿಪ್ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಏಳು ವರ್ಷದ ಮಗಳಿದ್ದಾಳೆ. (ಸಾಂದರ್ಭಿಕ ಚಿತ್ರ)
3/ 9
ಕೌಟುಂಬಿಕ ಕಲಹ ಹಿನ್ನೆಲೆ ಮನೆಯಲ್ಲಿ ಆಗಾಗ ಜಗಳ ಆಗ್ತಿತ್ತು. ಈ ಬಗ್ಗೆ ದೀಲಿಪ್ ಕುಟುಂಬಸ್ಥರ ಜೊತೆ ಚೈತ್ರಾ ಪೋಷಕರು ಮಾತನಾಡಿ ರಾಜಿ ಪಂಚಾಯ್ತಿ ಮಾಡಿಸಿದ್ದರು. (ಸಾಂದರ್ಭಿಕ ಚಿತ್ರ)
4/ 9
ರಾಜಿ ಪಂಚಾಯ್ತಿ ಬಳಿಕವೂ ಕಳೆದ ಎರಡು ದಿನಗಳ ಹಿಂದೆ ಚೈತ್ರಾ ಮತ್ತು ದಿಲೀಪ್ ಗಲಾಟೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇದೀಗ ಕೌಟುಂಬಿಕ ಕಲಹಕ್ಕೆ ಮನನೊಂದು ಚೈತ್ರಾ ಮಂಗಳವಾರ ಗಂಡನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
5/ 9
ಇನ್ನೂ ಮಗಳ ಸಾವಿನ ಸುದ್ದಿ ತಿಳಿದು ಗ್ರಾಮಕ್ಕೆ ಬಂದ ಚೈತ್ರಾ ಪೋಷಕರು, ಪುತ್ರಿಗೆ ಮಾನಸಿಕ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 9
ಈ ಸಂಬಂಧ ಚೈತ್ರಾ ಪೋಷಕರು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಗಳ ಸಾವಿನ ಬಗ್ಗೆ ದೂರು ಸಹ ದಾಖಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)
7/ 9
ಈ ಸಂಬಂಧ ಚೈತ್ರಾ ಪೋಷಕರು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಗಳ ಸಾವಿನ ಬಗ್ಗೆ ದೂರು ಸಹ ದಾಖಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)
8/ 9
ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ಸಂಬಂಧ ಚೈತ್ರಾ ಗಂಡ ದಿಲೀಪ್ ಹಾಗೂ ಅತ್ತೆ ಗಾಯಿತ್ರಮ್ಮಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
9/ 9
ಇದರ ಜೊತೆಗೆ ಪೊಲೀಸರು ಚೈತ್ರಾ ಕುಟುಂಬಸ್ಥರು ಮತ್ತು ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)