ದುಬೈ ಬಸವ ಸಮಿತಿಯಿಂದ ನೀಡಲಿರುವ ಬಸವ ಭೂಷಣ ಪ್ರಶಸ್ತಿ ಸ್ವೀಕರಿಸಲು ಮಾಜಿ ಸಿಎಂ, ಬಿಜೆಪಿ ಧುರೀಣ ಬಿಎಸ್ ಯಡಿಯೂರಪ್ಪ ದುಬೈ ಪ್ರವಾಸಲ್ಲೆ ಮುಂದಾಗಿದ್ದಾರೆ.
2/ 8
ಯುಎಇ ಬಸವ ಸಮಿತಿಯು ಕಳೆದ 15ನೇ ವರ್ಷಗಳಿಂದ ಬಸವ ಜಯಂತಿ ಆಚರಣೆ ಮಾಡುತ್ತಿದೆ. ದುಬೈನಲ್ಲಿರುವ ಕನ್ನಡಿಗರು ಪ್ರತಿ ವರ್ಷ ಬಸವ ಜಯಂತಿ ಆಚರಣೆ ಮಾಡುತ್ತ ಬಂದಿದ್ದಾರೆ.
3/ 8
ಪ್ರತಿ ವರ್ಷ ಸಮಾಜ ಸೇವೆಯಲ್ಲಿ ನಿರತರಾಗಿರುವ ಸಾಧಕರಿಗೆ ಈ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿದ್ದು, ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಭಾನುವಾರ ದುಬೈನ ಅಲ್ ಸಫಾದಲ್ಲಿರುವ ಜೆಎಸ್ಎಸ್ ಖಾಸಗಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
4/ 8
ಈ ಹಿನ್ನಲೆ ಅವರು ಇಂದು ಬೆಳಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಂದ ದುಬೈ ಪ್ರವಾಸ ನಡೆಸಿದ್ದಾರೆ. ಇಂದು ಅವರು ಅಲ್ಲಿಯೇ ವಾಸ್ತವ್ಯ ಹೂಡಲಿದ್ದ, ಸೋಮವಾರ ರಾತ್ರಿ ದುಬೈನಿಂದ ಹೊರಡಲಿದ್ದು, ಮಂಗಳವಾರ ರಾತ್ರಿ ಬೆಂಗಳೂರು ತಲುಪಲಿದ್ದಾರೆ.
5/ 8
ಇನ್ನು ತಮ್ಮ ದುಬೈ ಪ್ರವಾಸಕ್ಕೆ ಮುನ್ನ ರಾಜ್ಯ ರಾಜಕೀಯ ಕುರಿತು ಮಾತನಾಡಿದ ಮಾಜಿ ಸಿಎಂ ಬಿಎಸ್ವೈ, ಮುಂಬರುವ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ನಮ್ಮ ಗುರಿ ಆಗಿದೆ. ಈಗಾಗಲೇ ಪ್ರಧಾನಿ ಅವರಿಗೆ 150 ಕ್ಷೇತ್ರ ಗೆಲ್ಲುವ ಭರವಸೆ ನೀಡಿದ್ದೇವೆ.
6/ 8
ಆ ಗುರಿ ಮುಟ್ಟಲು ರಾಜ್ಯ ಪ್ರವಾಸ ಮಾಡುತ್ತೇವೆ. ಪ್ರತೀ ಜಿಲ್ಲೆಯಿಂದಲೂ ಬಿಜೆಪಿ ಬರಲು ಜನರು ಉತ್ಸಕರಾಗಿದ್ದಾರೆ. ಅದರಲ್ಲೂ ಮಂಡ್ಯದಿಂದ ಅನೇಕ ಜನ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂದರು.
7/ 8
ಇನ್ನು ಮೂರು ದಿನದಲ್ಲಿ ಸಂಪುಟ ಸರ್ಜರಿ ನಡೆಯಲಿದೆ ಎಂಬ ವಿಚಾರ ಕುರಿತು ಮಾತನಾಡಿದ ಅವರು, ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ನಾವು ಬದ್ಧವಾಗಿ ಇರುತ್ತೇವೆ. ಇಲ್ಲಿ ಕೇಂದ್ರ ನಾಯಕರ ತೀರ್ಮಾನವೇ ಅಂತಿಮ. ಇದರಲ್ಲಿ ನಾವು ಏನು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
8/ 8
ಬಸನಗೌಡ ಪಾಟೀಲ್ ಯತ್ನಾಳ್ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ್ ಹೇಳಿಕೆ ಬಗ್ಗೆ ನಾನೇನೂ ಮಾತಾಡುವುದಿಲ್ಲ. ಪಕ್ಷದ ನಾಯಕರಿದ್ದಾರೆ, ಅವರು ನೋಡಿಕೊಳ್ಳುತ್ತಾರೆ ಎಂದರು.