ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವಹೇಳನಕಾರಿ ಹೇಳಿಕೆಗೆ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಉಭಯ ಸದನದ ಬಾವಿಗಿಳಿಸಿದು ಪ್ರತಿಭಟನೆ ನಡೆಸಿದ್ದಾರೆ. ಇಂದಿನಿಂದ ರಾಜ್ಯದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಮಾರ್ಚ್5ಕ್ಕೆ ಸಿಎಂ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸಲಿದ್ದು, ಇಂದು ರಾಜ್ಯಪಾಲರ ಭಾಷಣದ ಮೇಲೆ ಅವರು ನಿರ್ಣಯ ಮಂಡಿಸಲು ಮುಂದಾಗಿದ್ದರು. ಆದರೆ, ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ನನ್ನನ್ನು ಶಾಸಕ ಸ್ಥಾನದಿಂದ ಪದಚ್ಯುತಗೊಳಿಸುವಂತೆ ಕಾಂಗ್ರೆಸ್ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಅದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಮಾಡಲು ಯಾವುದೇ ಉದ್ಯೋಗ ಇಲ್ಲದ ಕಾರಣ ಕೈ ಪಕ್ಷದ ನಾಯಕರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಕಿಡಿಕಾರಿದ್ದ ಬಿಜೆಪಿ ಶಾಸಕ ಯತ್ನಾಳ್ ಅವರೋರ್ವ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕಿಸ್ತಾನದ ಏಜೆಂಟ್” ಎಂದು ಕಿಡಿಕಾರಿದ್ದರು. ಈ ವಿಚಾರ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಯತ್ನಾಳ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ, ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಒತ್ತಾಯಿಸುತ್ತಿದೆ.
ಮಹಾದಾಯಿ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಕರ್ನಾಟಕಕ್ಕೆ ಕೈಗೆ ಬಂದ ತುತ್ತು ಬಾಯಿಗೆ ತಲುಪಲು ಇನ್ನೂ ಸಾಧ್ಯವಾಗುತ್ತಿಲ್ಲ. ಮಹದಾಯಿ ಯೋಜನೆಯನ್ನು ತತ್ಕ್ಷಣವೇ ಆರಂಭಿಸಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೊರ್ಟ್ ಸೂಚಿಸಿದೆ. ಮಹದಾಯಿ ಪ್ರಕರಣದಲ್ಲಿ ಕರ್ನಾಟಕದ ಯೋಜನೆಯನ್ನು ಆಕ್ಷೇಪಿಸಿ ಗೋವಾ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾ.ಚಂದ್ರಚೂಡ್, ನ್ಯಾ.ಅಜಯ್ ರಸ್ಟೋಗಿ ದ್ವಿಸದಸ್ಯ ಪೀಠವು ನಡೆಸಿತು. "2014ರ ಮಧ್ಯಂತರ ಆದೇಶದಲ್ಲಿ ನೀಡಿರುವ ನಿರ್ದೇಶನ ಪಾಲಿಸಬೇಕು. ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕು. ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಇದಲ್ಲದೆ ಡಿಪಿಆರ್ಗೆ ಒಪ್ಪಿಗೆ ಪಡೆದುಕೊಳ್ಳಬೇಕು. ಪರಿಸರ ಮೌಲ್ಯಮಾಪನ ವರದಿ ಮಾಡಿಸಿ ಒಪ್ಪಿಗೆ ಪಡೆಯಬೇಕು," ಎಂದು ಸುಪ್ರೀಂ ಆದೇಶಿಸಿತು.
ಮುಳ್ಳು ಹಂದಿಯನ್ನು ಕೊಂದು ಸುಟ್ಟುಹಾಕಿದ ನಾಲ್ವರು ಯುವಕರು ಅದನ್ನು ಟಿಕ್ಟಾಕ್ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟು ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿರಾಳ ಹಿಸ್ಸಾ ಗ್ರಾಮದ ಮಂಜುನಾಥ ಬಡಿಗೇರಾ, ಭಾಗಪ್ಪ, ಭೀಮಪ್ಪ ಹಾಗೂ ನಾಗೇಶ್ ಈ ಕೃತ್ಯ ಎಸಗಿದವರು. ಸಿಂಧಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕುರುಚಲು ಕಾಡಿನಲ್ಲಿ ಮುಳ್ಳು ಹಂದಿಯ ಬೇಟೆಯಾಡಿದ ಇವರು ಅದನ್ನು ಅಲ್ಲಿಯೇ ಸುಟ್ಟು ತಿಂದಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಟಿಕ್ ಟಾಕ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದರ ಜೊತೆಗೆ ಹಂದಿಯನ್ನು ತಿನ್ನೋ ಇಚ್ಛೆಇದ್ದವರು ಬನ್ನಿ ಎಂದು ಮಂಜುನಾಥ ಎಂಬಾತ ಆಹ್ವಾನವನ್ನೂ ಮಾಡಿದ್ದಾನೆ.
ಭದ್ರಕೋಟೆ ಹಾಸನ ಜಿಲ್ಲೆಯನ್ನು ಭೇದಿಸಲು ಬಿಜೆಪಿ ಸಕಲ ಪ್ರಯತ್ನ ಮಾಡುತ್ತಿದೆ. ಹಾಸನ ಮುಕ್ತ ಜೆಡಿಎಸ್ ಮಾಡಲು ಬಿಜೆಪಿ ಪಣತೊಟ್ಟಿದೆ. ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಎಲ್ಲಾ ನಾಯಕರೂ ಜೆಡಿಎಸ್ ಮುಕ್ತದ ಮಾತುಗಳನ್ನಾಡಿದ್ದಾರೆ. ಶತಾಯಗತಾಯ ಜೆಡಿಎಸ್ ಸೋಲಿಸಲು ಬಿಜೆಪಿ ವಿಭಿನ್ನ ಪ್ಲಾನ್ ರೂಪಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ತಮ್ಮ ಮಾತಿನುದ್ದಕ್ಕೂ ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡರ ಕುಟುಂಬದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ರು. ನಾವು ಪ್ರಧಾನಿ ಮಾಡಲು ಮಗನನ್ನ ಸಿಎಂ, ಸೊಸೆಯನ್ನ ಮಂತ್ರಿ, ಮೊಮ್ಮಗನನ್ನ ಸಂಸದ ಮಾಡಲು ಪಕ್ಷ ಘಟನೆ ಮಾಡುತ್ತಿಲ್ಲ, ಭಾರತಾಂಬೆಯನ್ನ ಜಗತ್ತಿನಲ್ಲಿ ವಿಶ್ವಗುರು ಮಾಡಲು ಸಂಘಟನೆ ಮಾಡುತ್ತಿದ್ದೇವೆ ಎಂದರು.
'ಬಾಹುಬಲಿ' ಸಿನಿಮಾ ತೆರೆಕಂಡ ನಂತರ ಪ್ರಭಾಸ್ ರೇಂಜ್ ಬೇರೆನೇ ಆಗಿದೆ. ಕೇವಲ ಟಾಲಿವುಡ್ಗೆ ಸೀಮಿತವಾಗಿದ್ದ ಪ್ರಭಾಸ್ ಈಗ ಬಾಲಿವುಡ್ನಲ್ಲೂ ಚಿರಪರಿಚಿತರಾಗಿದ್ದಾರೆ. ಅವರ ಅಭಿನಯದ 'ಸಾಹೋ' ಟಾಲಿವುಡ್ನಲ್ಲಿ ಸದ್ದು ಮಾಡದೇ ಹೋದರೂಬಿ-ಟೌನ್ನಲ್ಲಿ ಕೊಂಚ ಮಟ್ಟಿಗೆ ಜಯ ಸಾಧಿಸಿತು. ಪ್ರಭಾಸ್ ಅಭಿನಯದ ಸಿನಿಮಾ 'ಸಾಹೋ' ನೆಲಕಚ್ಚಿದರೂ ಅವರ ತಾರಾ ವರ್ಚಸ್ಸಿಗೆ ಯಾವುದೇ ತೊಂದರೆಯಾಗಿಲ್ಲ. ಈಗಲೂ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶಕ್ಕಾಗಿ ಸ್ಟಾರ್ ನಟಿಯರು ಸಾಲಿನಲ್ಲಿ ನಿಲ್ಲುತ್ತಾರೆ. ಇಂತಹ ನಟನೊಂದಿಗೆ ನಟಿಸಲು ಚಾನ್ಸ್ ಕೊಡ್ತೀವಿ ಅಂದರೆ ಏನಾಗಬೇಡ ಹೇಳಿ.
2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಸೆಮಿ ಫೈನಲ್ ಪಂದ್ಯ ನಡೆಯುತ್ತಿದೆ. 2ನೇ ಸೆಮೀಸ್ ಕದನದಲ್ಲಿ ಬೆಂಗಾಲ್ ತಂಡವನ್ನು ಕರ್ನಾಟಕ ತಂಡ 161 ರನ್ಗೆ ಆಲೌಟ್ ಮಾಡಿದ್ದು, ಗೆಲ್ಲಲು 352 ರನ್ಗಳ ಸವಾಲು ಸ್ವೀಕರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ತಂಡ ಅನುಸ್ತಪ್ ಮಜುಂದಾರ್ ಅವರ ಅಜೇಯ 149 ರನ್ಗಳ ನೆರವಿನಿಂದ 312 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಕರ್ನಾಟಕ ಇಶಾನ್ ಪೋರೆಲ್(5 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 122 ರನ್ಗೆ ಸರ್ವಪತನ ಕಂಡಿತು.