ಹೌದು, ಎಲ್ಲೆಲ್ಲಿ ಹೇಗೆ ಮೋಸ ಮಾಡುತ್ತಾರೆ ಅಂತ ನಾವು ಹೇಳುತ್ತೇವೆ ಓದಿ. ಇಲ್ಲಿ ನೀವು ನೋಡುತ್ತಿರುವ ಫೋಟೋದಲ್ಲಿ ಸಾಲಾಗಿ ಜೋಡಿಸಿಟ್ಟಿರುವ ತೂಕದ ಸ್ಕೇಲ್ ಗಳನ್ನು ಗಮನಿಸಿ. ಆ ತೂಕದ ಸ್ಕೇಲ್ ನಲ್ಲಿ ಕಾಣದಂತೆ ಇಟ್ಟಿರುವ ಚಿಪ್ ಗಳು, ಈ ಮಧ್ಯೆ ರಿಮೋಟ್ ನಿಂದ ತೂಕದ ವ್ಯತ್ಯಾಸ ಮಾಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ದೃಶ್ಯಗಳು ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕಂಡು ಬಂದಿದೆ.
ಬೆಂಗಳೂರಲ್ಲಿ ಕಣ್ಣೆದುರಲ್ಲೇ ಗ್ರಾಹಕರ ಕಣ್ಣಿಗೆ ಖದೀಮರು ಮಣ್ಣೆರಚುತ್ತಿದ್ದಾರೆ. ತೂಕದ ಸ್ಕೇಲ್ ನಲ್ಲಿ ಭಾರೀ ಅವ್ಯವಹಾರ ಮಾಡಿ ಲಾಭ ಮಾಡುತ್ತಿದ್ದಾರೆ. ಪಿಸಿಬಿ ಚಿಪ್ ಅಳವಡಿಸಿಕೊಂಡು ರಿಮೋಟ್ ಮೂಲಕ ತೂಕದ ಸ್ಕೇಲ್ ಕಂಟ್ರೋಲ್ ಮಾಡುತ್ತಾ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಕಂಡ ಬಂದಿದೆ. ಪ್ರಮುಖವಾಗಿ ನ್ಯಾಯಬೆಲೆ ಅಂಗಡಿ, ಗುಜರಿ, ಮಾಂಸದ ಅಂಗಡಿಗಳಲ್ಲಿ ಈ ಕಳ್ಳಾಟ ನಡೆಯುತ್ತಿದೆ.
ಈ ಕುರಿತಂತೆ ಪಶ್ಚಿ ವಿಭಾಗದ ಡಿಸಿಪಿ ಲಕ್ಷ್ಮಣ ಬಿ ನಿಂಬರಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನ್ಯಾಯಬೆಲೆ ಅಂಗಡಿಯಿಂದ ಹಿಡಿದು ಚಿಕ್ಕಪುಟ್ಟ ಅಂಗಡಿಗಳಲ್ಲಿ ರಿಮೋಟ್ ಮೂಲಕ ತೂಕದ ಸ್ಕೇಲ್ ಕಂಟ್ರೋಲ್ ಮಾಡಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದರು. ಪ್ರಮುಖವಾಗಿ 15 ಅಂಗಡಿಗಳಲ್ಲಿ ನಮ್ಮ ಪೊಲೀಸರು ದಾಳಿ ಮಾಡಿ ವಂಚನೆ ಮಾಡುತ್ತಿದ್ದನ್ನು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತೂಕದಲ್ಲಿ ಮೋಸ ಮಾಡಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿದ ಯುವಕ ಅರೆಸ್ಟ್!
ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿದ ಯುವಕನನ್ನು ಏರ್ಲೈನ್ಸ್ ಸಿಬ್ಬಂದಿ ಭದ್ರತಾ ಪಡೆಗೆ ಒಪ್ಪಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿ 1:30 ರ ವೇಳೆ ಘಟನೆ ನಡೆದಿದ್ದು, ಅಸ್ಸಾಂನಿಂದ ಬೆಂಗಳೂರಿಗೆ ಬರುವ ಇಂಡಿಗೋ ವಿಮಾನದಲ್ಲಿ ಅಸ್ಸಾಂ ಮೂಲದ ಶೇಹರಿ ಚೌದರಿ ಎಂಬ ಆರೋಪಿ ಸಿಗರೇಟ್ ಸೇವನೆ ಮಾಡಿದ್ದಾನೆ. ಇದರಿಂದ ಕೆಲ ಕಾಲ ವಿಮಾನದಲ್ಲಿ ಆತಂಕ ಎದುರಾಗಿತ್ತು. ವಿಮಾನದ ಶೌಚಾಲಯದಲ್ಲಿ ಹೊಗೆ ಮತ್ತು ವಾಸನೆ ಬಂದ ಹಿನ್ನಲೆ ಸಿಬ್ಬಂದಿ ಪರಿಶೀಲನೆ ನಡೆಸಿ ಆರೋಪಿಯನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಆರೋಪಿ ಶೇಹರಿ ಚೌದರಿ)