PWD JE ಪರೀಕ್ಷೆಯಲ್ಲೂ ಅಕ್ರಮ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದ್ದು, ಆಳಕ್ಕೆ ಹೋದಂತೆ ಹೊಸ ಹೊಸ ತಿರುವುಗಳನ್ನು ಈ ಪ್ರಕರಣ ಪಡೆದುಕೊಳ್ಳುತ್ತಿದೆ. ಇದೀಗ ಮತ್ತೊಂದು ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಬಗ್ಗೆ ವಿಡಿಯೋ ಹರಿದಾಡುತ್ತಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಇದರಲ್ಲಿ ಯುವಕನೋರ್ವ ರಹಸ್ಯ ಸ್ಥಳದಲ್ಲಿ ಕುಳಿತು ಉತ್ತರ ಹೇಳುತ್ತಿದ್ದಾನೆ.
2/ 8
ರಹಸ್ಯ ಸ್ಥಳದಲ್ಲಿ ಕುಳಿತ ಯುವಕ ಎಲೆಕ್ಟ್ರಾನಿಕ್ ಡಿವೈಸ್ಮೂಲಕ ಉತ್ತರ ಹೇಳಿದ್ದಾನೆ. ಪರೀಕ್ಷೆ ಸಮಯದಲ್ಲಿಯೇ ದೂರದಲ್ಲಿ ಕುಳಿತವನಿಗೆ ಪ್ರಶ್ನೆ ಪತ್ರಿಕೆ ಹೇಗೆ ತಲುಪಿತು ಎಂಬುದರ ಬಗ್ಗೆ ಪ್ರಶ್ನೆ ಮೂಡಿದೆ. (ಸಾಂದರ್ಭಿಕ ಚಿತ್ರ )
3/ 8
ರಹಸ್ಯ ಸ್ಥಳದಲ್ಲಿ ಉತ್ತರ ಹೇಳಿ ಕೊಡುತ್ತಿರುವವರು ಯಾರು ಮತ್ತು ಎಲ್ಲಿ ಈ ಘಟನೆ ನಡೆದಿದೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. (ಸಾಂದರ್ಭಿಕ ಚಿತ್ರ )
4/ 8
2021 ಡಿಸೆಂಬರ್ 13 ರಂದು ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನೀಯರ್ ಹುದ್ದೆಗಳಿಗೆ ಪರೀಕ್ಷೆ ನಡೆದಿದ್ದವು. (ಸಾಂದರ್ಭಿಕ ಚಿತ್ರ )
5/ 8
ಡಿಸೆಂಬರ್ ನಲ್ಲಿ ನಡೆದ ಪರೀಕ್ಷೆಗಳಿಗೆ ಕೆಲವರು ಲಾಡ್ಜ್ ನಲ್ಲಿ ಕುಳಿತು ಉತ್ತರ ಹೇಳಿ ಕೊಡುತ್ತಿದ್ದರು ಎಂದು ಟವಿ9 ಕನ್ನಡ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ )
6/ 8
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್, ನಮ್ಮ ಇಲಾಖೆಯಿಂದ ಯಾವುದೇ ಪರೀಕ್ಷೆ ನಡೆದಿಲ್ಲ. ಎಷ್ಟು ಹುದ್ದೆ ಬೇಕು ಅಂತ ನೋಟಿಫಿಕೇಶನ್ನ್ನು ಕೆಪಿಎಸ್ಸಿಗೆ ನೀಡಲಾಗಿತ್ತು. (ಸಾಂದರ್ಭಿಕ ಚಿತ್ರ )
7/ 8
ಲೋಕೋಪಯೋಗಿ ಇಲಾಖೆಯ ಪರೀಕ್ಷೆಯ ಅಕ್ರಮ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಬೆಂಗಳೂರಿಗೆ ತೆರಳಿದ ಬಳಿಕ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡೋದಾಗಿ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ )
8/ 8
ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಬಂಧಿಯಾಗಿರುವ ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿ ಮನೆಯಲ್ಲಿ ಪಿಡಬ್ಲ್ಯೂಡಿ ಪರೀಕ್ಷೆಯ ಹಾಲ್ ಟಿಕೆಟ್ ಗಳು ಪತ್ತೆಯಾಗಿದ್ದªವು. ಹಾಗಾಗಿ ಈ ಪರೀಕ್ಷೆಯಲ್ಲಿ ಮಂಜುನಾಥ್ ಮೇಳಕುಂದಿಯ ಕೈವಾಡ ಇರೋ ¨ಗ್ಗೆ ಶಂಕೆ ವ್ಯಕ್ತವಾಗಿದೆ.