PHOTOS: ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಉದ್ಘಾಟಿಸಿದ ಮುಖ್ಯಮಂತ್ರಿ
ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ ಕಾರ್ ಮತ್ತು ಸ್ಕೂಟರ್ಗಳಿಗಾಗಿ ವಿಧಾನಸೌಧದ ಆವರಣದಲ್ಲಿ ಅಳವಡಿಸಿರುವ ಚಾರ್ಜಿಂಗ್ ಪಾಯಿಂಟ್ನ್ನು ಇಂದು ಸಿಎಂ ಕುಮಾರಸ್ವಾಮಿ ಉದ್ಘಾಟನೆ ಮಾಡಿದರು. ಬೆಸ್ಕಾಂ ವತಿಯಿಂದ ಚಾರ್ಜಿಂಗ್ ಪಾಯಿಂಟ್ ಅಳವಡಿಕೆ ಮಾಡಲಾಗಿದ್ದು, ಪ್ರತಿ ಯೂನಿಟ್ಗೆ 4.25 ರೂಪಾಯಿಯಂತೆ ಒಂದು ಕಿಲೋ ವ್ಯಾಟ್ಗೆ 50 ರೂಪಾಯಿ ನಿಗದಿಪಡಿಸಲಾಗಿದೆ. ಈ ಚಾರ್ಜಿಂಗ್ ಪಾಯಿಂಟ್ನಲ್ಲಿ ಒಂದು ಕಾರ್ ಸಂಪೂರ್ಣ ಚಾರ್ಜ್ ಆಗಲು ಕನಿಷ್ಟ 90 ನಿಮಿಷ ಸಮಯ ಬೇಕಾಗುತ್ತದೆ. ಈಗ 15 ಕಿಲೋ ವ್ಯಾಟ್ ಚಾರ್ಜ್ನಲ್ಲಿ 100 ರಿಂದ 120 ಕಿ.ಮೀ ಕ್ರಮಿಸಬಹುದಾಗಿದೆ. ಇನ್ನು ಜನವರಿ ವೇಳೆಗೆ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ 11 ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗುತ್ತಿದೆ. ಕೆಲವು ಚಿತ್ರಗಳು ಇಲ್ಲಿವೆ ನೋಡಿ.