ದಾರಿ ಮಧ್ಯೆ ಸಿಕ್ಕ ಅನ್ನದಾತನಿಂದ ಆಶೀರ್ವಾದ ಪಡೆದು, ರೈತರ ದಿನದ ಶುಭಾಶಯ ಕೋರಿದ ಸಚಿವ ಸುರೇಶ್ ಕುಮಾರ್

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರೈತರ ದಿನವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿರುವ ಸಚಿವ ಸುರೇಶ್ ಕುಮಾರ್ ಹಾವೇರಿಯ ಬಳಿ ಸಾಗುತ್ತಿದ್ದಾಗ ರಸ್ತೆ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವಯಸ್ಸಾದ ರೈತನನ್ನು ಕಂಡು ತಾವೂ ಹೊಲದೊಳಗೆ ಇಳಿದಿದ್ದಾರೆ. ಆ ರೈತನಿಗೆ ಹೊಲದಲ್ಲೇ ಶಾಲು ಹೊದಿಸಿ, ಆಶೀರ್ವಾದ ಪಡೆದು ಮುಂದೆ ಸಾಗಿರುವ ಸಚಿವ ಸುರೇಶ್ ಕುಮಾರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಳಿಕ ಹಾವೇರಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸುರೇಶ್ ಕುಮಾರ್ ಮಕ್ಕಳೊಂದಿಗೆ ಕುಳಿತು ಕೆಲ ಹೊತ್ತು ಚರ್ಚಿಸಿದ್ದಾರೆ.

First published: