ಇನ್ನು, ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಮೊಟ್ಟೆ ವಿತರಿಸಲಾಗುತ್ತಿದೆ. ಆದರೆ ಮೊಟ್ಟೆ ದರ ಏರಿಕೆಯಿಂದಾಗಿ ಇದನ್ನು ಸ್ಥಗಿತಗೊಳಿಸುವ ಕೆಲವು ವಿಚಾರ ಕೂಡಾ ಕೇಳಿ ಬರುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಗಳಾದ ಬೀದರ್, ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವೆ ಎಂದು ಮಧ್ಯಾಹ್ನದ ಊಟದ ಯೋಜನೆಯಲ್ಲಿ ಕೆಲಸ ಮಾಡುವ ಹಿರಿಯ ಶಿಕ್ಷಣಾಧಿಕಾರಿಯೊಬ್ಬರು ತಿಳಿಸಿದ್ದರು.
ಇನ್ನು, ಒಂದು ಬ್ಯಾಚ್ ಮೊಟ್ಟೆ ಬೆಲೆ 2022ರ ಜನವರಿಯಲ್ಲಿ 437.58 ರೂಪಾಯಿ ಇತ್ತು, 2021ರ ಜನವರಿಯಲ್ಲಿ 437.06 ರೂಪಾಯಿ ಇತ್ತು. ಸದ್ಯ ವ್ಯಾಪಾರಿಗಳಿಗೆ ಒಂದು ಮೊಟ್ಟೆಗೆ 5.75 ರೂಪಾಯಿ ಹೋಲ್ ಸೇಲ್ ದರ ನಿಗದಿ ಮಾಡಲಾಗಿದೆ. ವ್ಯಾಪಾರಿಗಳು ತಮ್ಮ ಮೇಲೆ ಬೀಲುತ್ತಿರುವ ಹೆಚ್ಚಿನ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಹಿಸಿ 6.7 ರಿಂದ 7 ರೂಪಾಯಿಗೆ ಮಾರಾಟ ಮಾಡಲು ಚಿಂತನೆ ಮಾಡಿದ್ದಾರೆ.