ಕಿಮ್ಮನೆ ರತ್ನಾಕರ್ ಪಕ್ಷದ ಕಚೇರಿ ಮೇಲೆ ದಾಳಿ
ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಕ್ಷದ ಕಚೇರಿ ಮೇಲೆ ಎನ್ಐಎ, ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕಿಮ್ಮನೆ ರತ್ನಾಕರ್, NIAನ ಇಡಿ ಅಧಿಕಾರಿಗಳು ಪಕ್ಷದ ಕಚೇರಿಗೆ ಬಂದಿದ್ದರು. ಕಚೇರಿ ಕಟ್ಟಡ ಬಾಡಿಗೆ ಪಡೆದಿರುವ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕೆ ಉತ್ತರ ಕೊಟ್ಟಿದ್ದೇನೆ ಎಂದರು.
ನನ್ನ ಮನೆಗೆ ದಾಳಿ ಆಗಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಬಿಜೆಪಿಯವರು ಮಾಡುತ್ತಿರುವ ಕುತಂತ್ರ,. ನನ್ನ ಮನೆಗೆ ದಾಳಿ ಮಾಡಿದರೆ ಏನೂ ಸಿಗದು. ಹೆಚ್ಚೆಂದರೆ 10 ಸಾವಿರ ರೂ, ಟಿವಿ, ಫ್ರಿಡ್ಜ್ ಬಿಟ್ಟರೆ ಮತ್ತೇನೂ ಸಿಗದು. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿ ಇದರ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.