ಚುನಾವಣಾ ಆದೇಶ ಪತ್ರದಲ್ಲಿ ದಿನಗೂಲಿ ನೌಕರರು ಮತ್ತು ಸಾಮಾನ್ಯ ಕಾರ್ಮಿಕರು ಮತ್ತು ತಮ್ಮ ವಿಧಾನಸಭಾ ಕ್ಷೇತ್ರದ ಹೊರಗೆ ಕೆಲಸ ಮಾಡುವ ಎಲ್ಲಾ ಮತದಾರರು ವೇತನ ಸಹಿತ ರಜೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಉದ್ಯೋಗಿಯ ಗೈರು ಉದ್ಯಮ ಅಥವಾ ಸಂಸ್ಥೆಗೆ ಸಂಬಂಧಿಸಿದಂತೆ ಅಪಾಯ ಅಥವಾ ಭಾರೀ ನಷ್ಟವನ್ನು ಉಂಟುಮಾಡುವ ಅವಕಾಶವಿರುವ ಯಾವುದೇ ಮತದಾರರಿಗೆ ಇದು ಅನ್ವಯಿಸುವುದಿಲ್ಲ. (ಸಾಂದರ್ಭಿಕ ಚಿತ್ರ)
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನದವೂ ಮೇ 10 ರ ಬುಧವಾರದಂದು ನಡೆಯಲಿದೆ. ಮತದಾನ ಮಾಡಲು ವೋಟರ್ಗಳ ಭಾಗವಹಿಸುವಿಕೆಯನ್ನು ಹೆಚ್ಚಳ ಮಾಡಲು ಕೇಂದ್ರ ಚುನಾವಣಾ ಆಯೋಗ ಆಯುಕ್ತ ರಾಜೀವ್ ಕುಮಾರ್ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇನ್ನು, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಕರ್ನಾಟಕದ 224 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಮೇ 13 ರಂದು ಫಲಿತಾಂಶ ಲಭ್ಯವಾಗಲಿದೆ. (ಸಾಂದರ್ಭಿಕ ಚಿತ್ರ)
ಅಲ್ಲದೆ, ಇತ್ತೀಚಿನ ವರ್ಷದಲ್ಲಿ ಮತದಾನದ ದಿನ ಸೋಮವಾರ ಅಥವಾ ಶುಕ್ರವಾರ ಬಂದರೆ ಜನರು ರಜೆ ಪಡೆದುಕೊಂಡು ಮತದಾನ ಮಾಡುವ ಬದಲು ವಾರದ ರಜೆಯೊಂದಿಗೆ ನಗರ ಬಿಟ್ಟು ತೆರಳುತ್ತಿದ್ದಾರೆ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಬಾರಿ ಮತದಾನದ ದಿನ ಬುಧವಾರ ನಿಗದಿಯಾಗಿರುವುದರಿಂದ ಜನರಿಗೆ ಎರಡು ದಿನ ರಜೆ ಪಡೆಯುವುದು ಕಷ್ಟ ಸಾಧ್ಯವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)