ಇಂದು ಬೆಳಗಿನ ಜಾವ ಹಾಸನ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ಅರಕಲಗೂಡು ತಾಲೂಕಿನ ಹನೆಮಾರನಹಳ್ಳಿ, ಕಾರಹಳ್ಳಿ, ಗ್ರಾಮಗಳಲ್ಲಿ ಲಘು ಭೂಕಂಪ ಆಗಿದೆ.
2/ 7
ಇಂದು ಬೆಳಗಿನ ಜಾವ 4.38 ರಲ್ಲಿ ಭೂಮಿ ಕಂಪಿಸಿದ ಅನುಭವವಾಗಿ. ನಿದ್ದೆಯಲ್ಲಿದ್ದ ಜನ ಗಾಬರಿಯಿಂದ ಮನೆಯಿಂದ ಹೊರ ಓಡಿ ಬಂದಿರುವ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ)
3/ 7
ನಿದ್ರೆಯಲ್ಲಿದ್ದವರಿಗೆ ಲಘು ಭೂಕಂಪನ ಶಾಕ್ ನೀಡಿದೆ. ಹೊಳೆನರಸೀಪುರ, ಅರಕಲಗೂಡು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭೂ ಕಂಪನ ಆಗಿದೆ.
4/ 7
ದೊಡ್ಡ ರೀತಿಯ ಶಬ್ಧ ಬಂದ ಬಳಿಕ 4.38 ರಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ತಾಲ್ಲೂಕಿನ ಮುದ್ದನಹಳ್ಳಿ, ಅರಕಲಗೂಡು ಪಟ್ಟಣ, ಹನೆಮಾರನಹಳ್ಳಿ, ಕಾರಳ್ಳಿ ಗ್ರಾಮಗಳಲ್ಲಿ ಕಂಪನ ಉಂಟಾಗಿದೆ.
5/ 7
ಹೊಳೆನರಸೀಪುರ ತಾಲ್ಲೂಕಿನಲ್ಲೂ ಭೂಮಿ ನಡುಗಿದಂತೆ ಅಗಿದೆ. ಪಟ್ಟಣದ ಚಿಟ್ನಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ, ಅರಕಲಗೂಡು ರಸ್ತೆಯ ಬಡಾವಣೆಯಲ್ಲಿ ಜನ ಭೂಮಿ ಕಂಪಿಸುತ್ತಲೇ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
6/ 7
ನಿನ್ನೆ ಅಫ್ಘಾನಿಸ್ತಾನದಲ್ಲಿ ಭೀಕರ ಭೂ ಕಂಪನದ ಬಳಿಕ ಹಾಸನದಲ್ಲಿ ಭೂಕಂಪನ ಜನರಲ್ಲಿ ಭೀತಿ ಹುಟ್ಟಿಸಿದೆ. ಮಂಚ, ಮನೆಯಲ್ಲಿದ್ದ ವಸ್ತಗಳು ಅದುರಿದ ಅನುಭವ ಆಗಿದೆ. (ಪ್ರಾತಿನಿಧಿಕ ಚಿತ್ರ)
7/ 7
ಲಘು ಭೂಕಂಪನವನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ದೃಢಪಡಿಸಿದ್ದಾರೆ.