ತಡರಾತ್ರಿ 1.15 ಗಂಟೆಗೆ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ಚೆಂಬು ಗ್ರಾಮದಿಂದ 5.2 ಕಿಲೋ ಮೀಟರ್ ವಾಯುವ್ಯ ಭಾಗದಲ್ಲಿ ಭೂಕಂಪನ ಸಂಭವಿಸಿದೆ.
2/ 7
ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದ ಹಿನ್ನೆಲೆ ಜನರು ಭಯದಿಂದ ಜಾಗರಣೆ ಮಾಡುವಂತಾಗಿತ್ತು. ಪದೇ ಪದೇ ಭೂಮಿ ಕಂಪನ ಆಗುತ್ತಿರುವ ಹಿನ್ನೆಲೆ ಚೆಂಬು, ಪೆರಾಜೆ ಸುತ್ತಮುತ್ತಲ ಜನರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಒಂದೇ ವಾರದಲ್ಲಿ ಕೊಡಗು ವ್ಯಾಪ್ತಿಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿರೋದು ಜನರ ಆತಂಕಕ್ಕೆ ಕಾರಣವಾಗಿದೆ. ಪದೇ ಪದೇ ಭೂಮಿ ಕಂಪನ ಹಿನ್ನೆಲೆ ಸ್ಥಳಕ್ಕೆ ತಜ್ಞರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ರಾತ್ರಿ ಭೂಕಂಪನವಾಗಿರುವ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರು ಸಲ್ಲಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 1.8 ದಾಖಲಾಗಿದೆ ಎಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ತಡರಾತ್ರಿ ಸಂಭವಿಸಿದ ಭೂಕಂಪನದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೊಡಗು ಜಿಲ್ಲೆ ಝೋನ್-3ರಲ್ಲಿ ಬರುತ್ತದೆ. ಸುಮಾರು 30 ಕಿಲೋ ಮೀಟರ್ ವರೆಗೂ ಭೂ ಕಂಪಿಸಿದ ಅನುಭವ ಬರುತ್ತದೆ. (ಸಾಂದರ್ಭಿಕ ಚಿತ್ರ)
6/ 7
ಭೂಕಂಪನದ ತೀವ್ರತೆ ಕಡಿಮೆ. ಆದ್ದರಿಂದ ಜನರು ಆತಂಕ ಪಡಬೇಕಿಲ್ಲ. ಭೂಮಿಯಲ್ಲಿ ಬಿರುಕು ಸೇರಿದಂತೆ ಇನ್ನುಳಿದಂತೆ ಅಪಾಯವುಂಟಾದ್ರೆ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ 08272-221077, 221099 ಸಂಖ್ಯೆ ಕರೆ ಮಾಡಲು ಸೂಚನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿಯೂ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)