ತಾಲೂಕಿನ ಹಿಲಾಲಪುರ ವಡ್ಡನಕೇರ ಸಕ್ಕರಗಂಜ್ ನಿಂಬೂರ್ ಗ್ರಾಮಗಳಲ್ಲಿ ಭೂಕಂಪವಾಗಿದೆ. ಭೂಮಿಯ 5 ಕಿಲೋಮೀಟರ್ ಆಳದಲ್ಲಿ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ. ರಸ್ತೆ ಹಾಗೂ ಮನೆಗಳಲ್ಲಿ ಬಿರುಕು ಬಿಟ್ಟಿದ್ದು, ಭೂಕಂಪದ ಶಬ್ದ ಕೇಳಿ ಜನರೇ ಬೆಚ್ಚಿಬಿದ್ದಿದ್ದಾರೆ. ಮನೆಯಲ್ಲಿದ್ದ ಜನರೆಲ್ಲಾ ಹೊರಗೆ ಓಡಿ ಬಂದಿದ್ದಾರೆ. ಈ ಹಿನ್ನೆಲೆ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಅಧಿಕಾರಿಗಳು ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ. ಕಳೆದ ವರ್ಷ ಕೂಡ ಇದೆ ಗ್ರಾಮಗಳಲ್ಲಿ ಭೂಮಿ ಕಂಪಿಸಿತ್ತು. ಗ್ರಾಮಸ್ಥರು ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ತಾಲ್ಲೂಕಿನ ನಿಂಬೂರ್, ಸೀತಾಳಗೇರಾ, ಹುಣಸನಾಳ, ಕುಮಾರ್ ಚಿಂಚೋಳಿ ಗ್ರಾಮಗಳಲ್ಲಿ ಭೂಕಂಪದಂತೆ ನಿಗೂಢವಾದ ಶಬ್ದ ಕೇಳಿ ಬಂದಿತ್ತು. ಮತ್ತೆ ಇದೀಗ ತಾಲ್ಲೂಕಿನಲ್ಲಿ ಪದೇ ಪದೇ ಭೂಕಂಪನ ಸಂಭವಿಸಿರುವ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದಾರೆ.